ಗರ್ಭಿಣಿ ಪತ್ನಿ ಪರಾಕಾಷ್ಠೆ ಹೊಂದಲು ನಾನು ಮಾಡುವ ಈ ಕ್ರಿಯೆ ಮಗುವಿನ ಮೇಲೆ ಪರಿಣಾಮ ಬೀರಬಹುದೇ?
ಗುರುವಾರ, 22 ಆಗಸ್ಟ್ 2019 (09:42 IST)
ಬೆಂಗಳೂರು : ನನ್ನ ಹೆಂಡತಿ 5 ತಿಂಗಳ ಗರ್ಭಿಣಿ. ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ. ಆದರೆ ನಾವಿಬ್ಬರೂ ಪರಾಕಾಷ್ಠೆ ಹೊಂದಲು ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತೇವೆ. ಆಕೆ ಪರಾಕಾಷ್ಠೆ ಹೊಂದಲು ನನ್ನ ಬೆರಳುಗಳನ್ನು ಆಕೆಯ ಯೋನಿಗೆ ಸೇರಿಸುತ್ತೇನೆ. ಇದು ನಮ್ಮ ಮಗುವಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಹುದೇ?
ಉತ್ತರ: ನೀವು ಏನು ಮಾಡಬಾರದು ಮತ್ತು ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿಯನ್ನು ಆಕೆಯ ವೈದ್ಯರ ಬಳಿ ಕೇಳಿ ತಿಳಿಯಿರಿ. ನೀವು ಮೊದಲು ಯೋನಿಯೊಳಗೆ ಬೆರಳುಗಳನ್ನು ತೂರಿಸುವುದನ್ನು ನಿಲ್ಲಿಸಿ. ಸಂಭೋಗದ ಸ್ಥಾನಗಳ ಬಗ್ಗೆ ಇನ್ನಷ್ಟು ತಿಳಿಯಿರಿ. ಸಾಮಾನ್ಯವಾಗಿ 8 ತಿಂಗಳವರೆಗೆ ದಂಪತಿಗಳು ಲೈಂಗಿಕ ಸಂಭೋಗ ನಡೆಸಬಹುದು.