ಹೆಚ್ಚು ಹೊತ್ತು ಮಿಲನ ಕ್ರಿಯೆ ನಡೆಸಲು ಗುಳಿಗೆ ಸೇವಿಸಬಹುದೇ?
ಗುರುವಾರ, 29 ಆಗಸ್ಟ್ 2019 (08:58 IST)
ಬೆಂಗಳೂರು: ಮಿಲನ ಕ್ರಿಯೆ ಹೆಚ್ಚು ಹೊತ್ತು ನಡೆಸಬೇಕು, ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರೆ ಯಾವುದಾದರೂ ಔಷಧಿ ಇರಬಹುದೇ, ಇದನ್ನು ಸೇವಿಸಬಹುದೇ ಎಂಬ ಅನುಮಾನ ಕೆಲವರಿಗಿರುತ್ತದೆ.
ನಿಜವಾಗಿ ಈ ರೀತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಗುಳಿಗೆ ಸೇವನೆ ಮಾಡುವುದಕ್ಕಿಂತ ನಿಮ್ಮ ಆಹಾರ ಪದ್ಧತಿ ಬದಲಿಸಿ, ದೈಹಿಕ ಕಸರತ್ತು ಮಾಡಿ ದೇಹದಲ್ಲಿ ಚೈತನ್ಯ ಹೆಚ್ಚಿಸಿಕೊಳ್ಳುವುದನ್ನು ಅಭ್ಯಾಸ ಮಾಡಿ. ಅದನ್ನು ಬಿಟ್ಟು ಸಿಕ್ಕ ಸಿಕ್ಕ ಔಷಧಗಳನ್ನು ತೆಗೆದುಕೊಂಡರೆ ಅಡ್ಡಪರಿಣಾಮದ ಅಪಾಯವೇ ಹೆಚ್ಚು.