ಲವಂಗದಲ್ಲಿ ಇಷ್ಟೊಂದು ಆರೋಗ್ಯಕರ ಲಾಭಗಳಿದೆಯಂತೆ !!

ಮಂಗಳವಾರ, 17 ಜುಲೈ 2018 (18:25 IST)
ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತುವಾಗಿದೆ. ಇನ್ನು ಹಲವು ಉಪಯುಕ್ತ ಔಷಧೀಯ ಗುಣಗಳನ್ನು ಹೊಂದಿರುವ ಲವಂಗ ಹಲವು ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಲವಂಗದಲ್ಲಿ ಮ್ಯಾಂಗನೀಸ್, ವಿಟಮಿನ್ ಕೆ, ವಿಟಮಿನ್ ಸಿ, ಸಣ್ಣ ಪ್ರಮಾಣದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಇ ಮತ್ತು ಇತರ ನಾರಿನಾಂಶಗಳು ಮತ್ತು ಖನಿಜಾಂಶಗಳು ಇವೆ.
- ಲವಂಗ ಮತ್ತು ಉಪ್ಪಿನ ಹರಳುಗಳನ್ನು ಬಾಯಲ್ಲಿಟ್ಟು ಚೀಪುತ್ತಿದ್ದರೆ ಕಫಕರಗುತ್ತದೆ. ಕೆಮ್ಮು ಮತ್ತು ಗಂಟಲು ಕೆರೆತ ಕಡಿಮೆಯಾಗುತ್ತದೆ.
 
- ಬಾಯಿಯ ದುರ್ಗಂಧವಿದ್ದಲ್ಲಿ ಲವಂಗದ ಕಷಾಯದಲ್ಲಿ ಬಾಯಿ ಮುಕ್ಕಳಿಸಿ. ಸಮಸ್ಯೆಯಿಂದ ಮುಕ್ತರಾಗಬಹುದು.
 
- ಲವಂಗದ ಕಷಾಯವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ‌ಸುಲಭವಾಗುತ್ತದೆ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ.
 
- ನಿತ್ಯ ಲವಂಗ ಸೇವಿಸುವುದರಿಂದ ರಕ್ತದೊತ್ತಡವನ್ನು ನಿವಾರಿಸಬಹುದು.
 
- ಸಾಮಾನ್ಯ ಶೀತಕ್ಕೆ ಹದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಸಾಕು.
 
- ಲವಂಗದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
 
- ಆಂಟಿ ಬ್ಯಾಕ್ಟೀರಿಯಲ್‌ ಗುಣಗಳನ್ನು‌ ಸಮೃದ್ಧವಾಗಿ ಹೊಂದಿರುವ ಲವಂಗ ನಮ್ಮ‌ ಶರೀರದಲ್ಲಿ ಬರುವ ಅನೇಕ ವೈರಲ್ ಸಮಸ್ಯೆಗಳಿಂದ ಪಾರು ಮಾಡುತ್ತದೆ.
 
- ಲವಂಗದಲ್ಲಿರು ಸೂಕ್ಷ್ಮಾಣು ವಿರೋಧಿ ಗುಣಗಳು ಸೆಳೆತ, ನಿಶ್ಯಕ್ತಿ ಮತ್ತು ಭೇದಿ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುತ್ತದೆ.
 
- ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಯಕೃತ್‌ನ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ.
 
- ಲವಂಗದ ಎಲೆಯನ್ನು ಪುಡಿ ಮಾಡಿ ನೋವಿರುವ ಹಲ್ಲಿನ ಮೇಲಿಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ. 
 
- ಕೆಮ್ಮು, ನೆಗಡಿ, ಗಂಟಲು ನೋವು ಇರುವವರು 3 ಲವಂಗಗಳನ್ನು 5 ಮೆಣಸು ಕಾಳುಗಳ ಜೊತೆ ಸೇರಿಸಿ ಪುಡಿ ಮಾಡಿ ಇದನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಬೇಗ ಕಡಿಮೆಯಾಗುತ್ತದೆ.
 
- ಲವಂಗದ ಸೇವನೆಯಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ಪಡೆಯುತ್ತದೆ ಮತ್ತು ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ.
 
- ಲವಂಗದಲ್ಲಿ ವಿಟಮಿನ್ ಎ ಪೌಷ್ಠಿಕಾಂಶ ಇರುವುದರಿಂದ ಇದು ಕಣ್ಣಿನ ಹಲವು ಸಮಸ್ಯೆಗಳನ್ನು‌ ನಿವಾರಿಸುತ್ತದೆ.
 
- 7 ರಿಂದ 8 ಲವಂಗಗಳನ್ನು ನೀರಿನಲ್ಲಿ ಕುದಿಸಿ ಇದನ್ನು ಕ್ರಮಬದ್ಧವಾಗಿ ಸೇವಿಸಿದರೆ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸಿ ತೂಕವನ್ನು ಕಡಿಮೆ‌ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ