ರಕ್ತ ಶುದ್ಧೀಕರಿಸಲು ಈ ಆಹಾರಗಳನ್ನು ಸೇವಿಸಿ

ಶುಕ್ರವಾರ, 13 ಜುಲೈ 2018 (14:27 IST)
ನಮ್ಮ ದೇಹದ ಅತ್ಯಂತ ಪ್ರಮುಖ ದ್ರವವೆಂದರೆ ರಕ್ತ. ರಕ್ತದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ರಕ್ತದ ಗುಣಮಟ್ಟ ಉತ್ತಮವಾಗಿರಬೇಕಾದರೆ ಮಲಿನಗೊಂಡ ರಕ್ತವನ್ನು ಶುದ್ಧೀಕರಿಸುತ್ತಾ ಇರಬೇಕಾಗುತ್ತದೆ.
- ಅರಿಶಿನ ಒಂದು ಉತ್ತಮವಾದ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಒತ್ತಡನಿವಾರಕವಾಗಿದೆ. ಅಲ್ಲದೇ ಇದೊಂದು ಉತ್ತಮ ರಕ್ತ ಶುದ್ಧೀಕಾರಕವೂ ಆಗಿದೆ. ನಿತ್ಯವೂ ಆಹಾರದಲ್ಲಿ ಅರಿಸಿನವನ್ನು ಸೇವಿಸುವ ಮೂಲಕ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಬಹುದು.
 
- ಬ್ರೊಕೋಲಿಯಲ್ಲಿ ಉತ್ಕರ್ಷಣ ನಿರೋಧಕಗಳು (ಆ್ಯಂಟಿ ಆಕ್ಸಿಡೆಂಟ್) ಇದ್ದು, ಇದು ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ರಕ್ತವನ್ನು ಶುದ್ಧ ಮಾಡುತ್ತದೆ.
 
- ಕ್ಯಾಬೇಜ್ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ.
 
- ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌, ಖನಿಜಾಂಶವು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತವೆ ಹಾಗೂ ರಕ್ತವನ್ನು ಶುದ್ಧೀಕರಿಸುತ್ತದೆ.
 
- ಕೊತ್ತಂಬರಿ ಸೊಪ್ಪಿನಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣವಿದ್ದು ವಿಶೇಷವಾಗಿ ರಕ್ತದಲ್ಲಿ ಮತ್ತು ಶರೀರದ ಇತರ ಭಾಗಗಳಲ್ಲಿ ಸಂಗ್ರಹಗೊಂಡಿದ್ದ ಭಾರವಾದ ಲೋಹದ ಕಣಗಳನ್ನು ನಿವಾರಿಸಲು ನೆರವಾಗುತ್ತದೆ.
 
- ಕೇಯ್ನ್ ಮೆಣಸಿನಲ್ಲಿ ವಿಟಮಿನ್ ಇ ಹಾಗೂ ಏ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಇವೆಲ್ಲವೂ ರಕ್ತ ಶುದ್ಧೀಕರಣದಲ್ಲಿ ನೆರವಾಗುತ್ತವೆ.
 
- ಬೀಟ್ರೂಟ್ ಅನ್ನು ನೀವು ಸೂಪ್ ಅಥವಾ ಪದಾರ್ಥ ಮಾಡಿ ತಿನ್ನುವುದರಿಂದ ಅದರಲ್ಲಿರುವ ಕೆಲವೊಂದು ನೈಸರ್ಗಿಕ ರಕ್ತಶುದ್ದೀಕರಣ ಮತ್ತು ಯಕೃತ್ ಶುದ್ದೀಕರಣ ಅಂಶವೂ ದೇಹಕ್ಕೆ ತುಂಬಾ ನೆರವಾಗುತ್ತದೆ.
 
- ಹಾಗಾಲಕಾಯಿಯ ಸೇವನೆ ರಕ್ತವನ್ನು ಶುದ್ಧೀಕರಿಸುವಲ್ಲಿ ತುಂಬಾ ಪರಿಣಾಮಕಾರಿ.
 
- ರಕ್ತ ಬಹಳ ಕಲ್ಮಶವಾಗಿ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದ್ದರೆ ಪ್ರತೀದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕಹಿ ಬೇವಿನ ಎಲೆಯನ್ನು ಜಜ್ಜಿ ತಿನ್ನಿ. ಇದು ಕೆಲವೇ ದಿನಗಳಲ್ಲಿ ನಿಮ್ಮ ರಕ್ತವನ್ನು ಶುದ್ಧ ಮಾಡುತ್ತದೆ.
 
- ನಿಮ್ಮ ಟೀಯಲ್ಲಿ ಹಸಿಶುಂಠಿ, ಪುದೀನಾ, ಎಲಕ್ಕಿ ಮೊದಲಾದವುಗಳನ್ನು ಕುದಿಯುವ ಸಮಯದಲ್ಲಿ ಬೆರೆಸಿ ಸೇವಿಸುವ ಮೂಲಕ ರಕ್ತವೂ ಶುದ್ಧಿಗೊಳ್ಳುತ್ತದೆ.
 
- ಅನಾನಾಸ್ ಸೇವನೆಯಿಂದ ರಕ್ತವನ್ನು ಶುದ್ಧೀಕರಿಸಬಹುದು. ಈ ಹಣ್ಣು ಕಿಡ್ನಿಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
 
- ಪ್ರತೀದಿನ ನೆಲ್ಲಿಕಾಯಿ ತಿನ್ನುವುದು ಅಥವಾ ಸ್ವಲ್ಪ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ.
 
- ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳಾದ ಕರಬೂಜ, ಕಿತ್ತಳೆ, ರಾಸ್ಪ್ಬೆರಿ, ಸೇಬು, ಕಿವಿಹಣ್ಣು, ಚಕ್ಕೋತ, ದಾಳಿಂಬೆ, ಕ್ರ್ಯಾನ್ಬೆರಿ ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತ ಶುದ್ಧೀಕರಣಗೊಳ್ಳುವುದು ಮಾತ್ರವಲ್ಲ, ಕ್ಯಾನ್ಸರ್ ಹರಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲೂ ಸಾಧ್ಯವಾಗುತ್ತದೆ. 
 
- ತುಳಸಿ ಎಲೆಗಳನ್ನು ಕೊಂಚವೇ ನಿತ್ಯವೂ ಸೇವಿಸುವ ಮೂಲಕ ರಕ್ತವನ್ನು ಅತ್ಯುತ್ತಮವಾಗಿ ಶುದ್ಧೀಕರಿಸಬಹುದು.
 
- ಹಸಿರು ಪಾಲಕನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ