ಗುಪ್ತಾಂಗದಲ್ಲಿ ತುರಿಕೆ ಬಂದರೆ ಗರ್ಭಿಣಿ ಎಂದರ್ಥವೇ?

ಬುಧವಾರ, 29 ಜನವರಿ 2020 (09:01 IST)
ಬೆಂಗಳೂರು: ನನ್ನ ಗೆಳೆಯನ ಜತೆ ಕಾಂಡೋಮ್ ಧರಿಸಿಯೇ ಒಂದಾಗಿರುತ್ತೇವೆ. ಆ ಸಂದರ್ಭದಲ್ಲಿ ನನ್ನ ಗುಪ್ತಾಂಗದಿಂದ ರಕ್ತಸ್ರಾವವಾಯಿತು. ಈಗ ನನ್ನ ಯೋನಿಯಲ್ಲಿ ತುರಿಕೆ ಉಂಟಾಗುತ್ತಿದೆ. ಇದು ಗರ್ಭವತಿಯಾಗಿರುವುದರ ಲಕ್ಷಣವೇ?


ಯೋನಿಯಲ್ಲಿ ರಕ್ತ ಸ್ರಾವವಾಗಿದ್ದರೆ ಭಯಬೇಕಾಗಿಲ್ಲ. ಬಹುಶಃ ಬಿರುಸಾದ ಲೈಂಗಿಕ ಕ್ರಿಯೆ ನಡೆಸುವಾಗ ನಿಮ್ಮ ಯೋನಿ ಪೊರೆಗೆ ಗಾಯವಾಗಿ ರಕ್ತಸ್ರಾವವಾಗಿರಬಹುದು. ಇದಕ್ಕೆ ವೈದ್ಯರ ಸಲಹೆ ಪಡೆದು ಕ್ರೀಂ ಬಳಸಬಹುದು. ಇನ್ನು, ತುರಿಕೆಯಾಗುತ್ತಿದ್ದರೆ ಅದಕ್ಕೆ ಗುಪ್ತಾಂಗದ ಸೋಂಕು ಕಾರಣವಿರಬಹುದೇ ಹೊರತು ಗರ್ಭಿಣಿಯಾಗಿರುವುದರ ಲಕ್ಷಣವಾಗಿರಲಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ