ಹರೆಯದಲ್ಲಿ ಯುವಕನೊಂದಿಗೆ ಮಲಗಿದ್ದ ವಿಷಯ ಮದುವೆ ಬಳಿಕ ಗಂಡನಿಗೆ ಗೊತ್ತಾಗುತ್ತಾ?
ಶನಿವಾರ, 14 ಮಾರ್ಚ್ 2020 (14:45 IST)
ಸಮಸ್ಯೆ : ನಾನು 28 ರ ತರುಣಿ . ಮದುವೆಯಾಗಿ ಹತ್ತು ತಿಂಗಳು ಆಗಿವೆ. ಗಂಡನ ಜೊತೆ ನನ್ನ ಲೈಂಗಿಕ ಸಂಬಂಧ ಉತ್ತಮವಾಗಿದೆ . ದಿನಕ್ಕೆ ಒಂದು ಬಾರಿ ಮಾತ್ರ ಸಂಪರ್ಕ ನಡೆಸುತ್ತೇವೆ .
ನನಗೆ 18 ವರ್ಷವಿದ್ದಾಗ ನನ್ನ ಪಕ್ಕದ ಮನೆ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಮೊಲೆಗೆ ಕೈ ಹಾಕುತ್ತಿದ್ದ . ಹಲವು ಬಾರಿ ಬಟ್ಟೆ ಕಳಚಿ ಸಂಭೋಗ ನಡೆಸಿದ್ದ .
ಆದರೆ ಈಗ ನನಗೆ ಮದುವೆಯಾಗಿದೆ . ನನ್ನ ಗಂಡ ಸಮಾಗಮದಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆ . ಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆ . ನಾನೇ ಮೊದಲೇ ಅವರನ್ನು ಚುಂಬಿಸುವುದು , ಮುದ್ದಾಡುವುದು , ನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ .
ಆದರೆ ಒಂದು ದಿನ ಅವರು ನನ್ನಲ್ಲಿ ` ನಿನಗೆ ಅನುಭವ ಇದೆಯಾ ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರು . ಅಲ್ಲಿಂದ ನಂತರ ನಾನೇ ಮೊದಲಾಗಿ ಅವರ ಜೊತೆ ರೋಮ್ಯಾನ್ಸ್ ಮಾಡಲು ಹೋಗುವುದಿಲ್ಲ . ನಾನು ಹರೆಯದಲ್ಲಿ ಯುವಕನೊಂದಿಗೆ ಸೇರಿ ನಡೆಸಿದ ಲೈಂಗಿಕ ಕ್ರಿಯೆಯ ವಿಷಯ ಗಂಡನಿಗೆ ಗೊತ್ತಾಗಿರಬಹುದೇ ?
ಸಲಹೆ : ನಿಮ್ಮ ಹರೆಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ . ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ . ಈ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ .
ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದು . ಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ . ಈ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ .
ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆ . ಹೆಂಡತಿಯನ್ನು ಆಲಂಗಿಸಿ ಕೊಳ್ಳುವುದು , ಮುದ್ದಾಡುವುದು , ಉದ್ರೇಕಗೊಳಿಸುವುದು , ಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆ . ಪತ್ನಿಯಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ .
ಆ್ಯಪ್ನಲ್ಲಿ ವೀಕ್ಷಿಸಿ x