ಕಣ್ಣಿನ ಸುತ್ತ ಕಪ್ಪು ವರ್ತುಲವೇ? ಹೀಗೆ ಮಾಡಿ

ಭಾನುವಾರ, 19 ಫೆಬ್ರವರಿ 2017 (04:15 IST)
ಬೆಂಗಳೂರು: ಕಣ್ಣಿನ ಕೆಳಗೆ ಕಪ್ಪು ವರ್ತುಲ ಬಂದರೆ ಮುಖದ ಅಂದವೇ ಹಾಳಾಗುತ್ತದೆ. ಎಷ್ಟು ಕ್ರೀಂ ಹಚ್ಚಿದರೂ ಅದನ್ನು ಮುಚ್ಚಲು ಸಾಧ್ಯವಿಲ್ಲ. ಹಾಗಿದ್ದರೆ ಕಪ್ಪು ವರ್ತುಲ ನಿವಾರಿಸಲು ಮನೆ ಮದ್ದು ಏನು?

 
ಸೌತೆಕಾಯಿ

ಸೌತೇಕಾಯಿಯನ್ನು ತೆಳುವಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟು ತಂಪು ಮಾಡಿ. ನಂತರ ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕಪ್ಪು ವರ್ತುಲ ಇರುವಲ್ಲಿ ಇಟ್ಟುಕೊಂಡು ಕೂಲ್ ಆಗಿ.

ಆಲೂಗಡ್ಡೆ

ಆಲೂಗಡ್ಡೆಯನ್ನು ಕತ್ತರಿಸಿಕೊಂಡು ರಸ ತೆಗೆದುಕೊಳ್ಳಿ. ಒಂದು ಹತ್ತಿ ಅಥವಾ ಶುದ್ಧವಾದ ಬಟ್ಟೆ ಬಳಸಿಕೊಂಡು ಆಲೂಗಡ್ಡೆ ರಸಕ್ಕೆ ಅದ್ದಿಕೊಂಡು ಕಪ್ಪು ವರ್ತುಲ ಇರುವ ಜಾಗದಲ್ಲಿಟ್ಟು ಸ್ವಲ್ಪ ಹೊತ್ತು ಬಿಡಿ. ಇದನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾಡುತ್ತಿದ್ದರೆ ಸಾಕು.

ಟೊಮೆಟೊ

ಟೊಮೆಟೊ ರಸ ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿಕೊಂಡು ಕಪ್ಪು ವರ್ತುಲ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಟೊಮೆಟೋ ಇಲ್ಲದಿದ್ದರೆ, ಕೇವಲ ನಿಂಬೆ ರಸವನ್ನೂ ಹೀಗೆ ಹಚ್ಚಿದರೂ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ