ಬೆಂಗಳೂರು : ಬಟರ್ ಚಿಕನ್ ರೊಟ್ಟಿ, ಚಪಾತಿ ತಿನನ್ಲು ಚೆನ್ನಾಗಿರುತ್ತದೆ. ಹೋಟೆಲ್ ನಲ್ಲಿ ಒಂದಷ್ಟು ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್ ಚಿಕನ್ ಮಾಡಿ.
ಮಾಡುವ ವಿಧಾನ : ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆ ಹಾಗೇ ಇಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚಿಕನ್ ಹಾಕಿ ಹತ್ತು ನಿಮಿಷ ಹುರಿದುಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಅದು ಕರಗಿದ ಮೇಲೆ ಪಲಾವ್ ಎಲೆ, ಪೇಸ್ಟ್ ಮಾಡಿದ ಈರುಳ್ಳಿ, ಟೊಮೆಟೊ ಪೇಸ್ಟ್ ಹಾಕಿ ಕುದಿಸಿ. ನಂತರ ಇದಕ್ಕೆ ಮೆಣಸಿನ ಪುಡಿ, ಜೀರಿಗೆ ಪುಡಿ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಗೋಡಂಬಿಯನ್ನು ರುಬ್ಬಿ ಹಾಕಿ, ನಂತರ ಇದಕ್ಕೆ ಸ್ವಲ್ಪ ಮೊಸರು, ಚಿಕನ್, ಗರಂ ಮಸಾಲಾ ಸೇರಿಸಿ ಬೇಯಿಸಿ. ಕೊನೆಗೆ ಕೊತ್ತಂಬರಿಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿಯಾದ ಬಟರ್ ಚಿಕನ್ ರೆಡಿ.