ತೂಕ ಇಳಿಸಬೇಕೆಂದರೆ ಬೆಳಗೆದ್ದು ನೀವು ಹೀಗೆ ಮಾಡಬೇಕು

ಬುಧವಾರ, 9 ಆಗಸ್ಟ್ 2017 (09:39 IST)
ಬೆಂಗಳೂರು: ಸ್ಥೂಲ ಕಾಯದವರು ದೇಹ ತೂಕ ಇಳಿಸಿಕೊಳ್ಳಲು ಅದೇನೇನೋ ಸರ್ಕಸ್ ಮಾಡ್ತಾರೆ. ಅದನ್ನೆಲ್ಲಾ ಬಿಟ್ಟು, ಬೆಳಗೆದ್ದು ಕೆಲವು ಸಿಂಪಲ್ ಕೆಲಸ ಮಾಡಿದರೆ ಸಾಕು. ತೂಕ ಇಳಿಸಬಹುದು. ಅವು ಯಾವುವು ನೋಡೋಣ.

 
ಬಿಸಿ ನೀರು
ಬೆಳಗೆದ್ದು ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ಹೊಸ ಶಕ್ತಿ ನೀಡುತ್ತದೆ. ಬಿಸಿ ನೀರಿಗೆ ಒಂದೆರಡು ಹನಿ ಜೇನುತುಪ್ಪ ಸೇರಿಸಿ ಕುಡಿಯುವುದಂತೂ ಇನ್ನೂ ಉತ್ತಮ.

ನೀರು
ಬೆಳ್ಳಂ ಬೆಳಗ್ಗೆ ದೇಹಕ್ಕೆ ಸಾಕಷ್ಟು ನೀರು ಒದಗಿಸುವುದು ಕೊಬ್ಬು ಕರಗಿಸಲು ಇರುವ ಸುಲಭ ಮಂತ್ರ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಸಾಕಷ್ಟು ನೀರು ಸೇವಿಸಿ.

ಉಪಾಹಾರ
ಉಪಾಹಾರಕ್ಕೆ ಎಣ್ಣೆ ಪದಾರ್ಥಗಳನ್ನು ಆದಷ್ಟು ದೂರ ಮಾಡಿ. ಅಧಿಕ ನಾರಿನಂಶವಿರುವ, ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸಿ.

ಹೊರಗಿನ ಊಟ ಬಿಡಿ
ಕಚೇರಿಯಲ್ಲಿ ಕೆಲಸ ಮಾಡಬೇಕಾದರೆ ಮಧ್ಯಾಹ್ನದ ಊಟಕ್ಕೆ ಬುತ್ತಿ ಕೊಂಡೊಯ್ಯಲು ಉದಾಸೀನ ಮಾಡಬೇಡಿ. ಹೊರಗಿನ ಊಟ ಬಿಟ್ಟು ಆದಷ್ಟು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ.

ವ್ಯಾಯಾಮ
ನಿಮಗೆ ಗೊತ್ತಿರುವ ಸರಳ ವ್ಯಾಯಾಮಗಳನ್ನು ಮಾಡಿಕೊಳ್ಳಿ. ಅದಲ್ಲದಿದ್ದರೆ, ದಿನಕ್ಕೆ ಅರ್ಧಗಂಟೆಯಾದರೂ ದೇಹಕ್ಕೆ ಶ್ರಮಕೊಡುವ ಕೆಲಸ ಮಾಡಿದರೂ ಸಾಕು. ಕೊಬ್ಬು ತನ್ನಿಂತಾನೇ ಕರಗುತ್ತದೆ.

ಇದನ್ನೂ ಓದಿ.. ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ