ಕಲ್ಲಂಗಡಿ ಹಣ್ಣನ್ನು ಅಪ್ಪಿತಪ್ಪಿಯೂ ಈ ಸಮಯದಲ್ಲಿ ಸೇವಿಸಬೇಡಿ

ಗುರುವಾರ, 18 ಮಾರ್ಚ್ 2021 (07:53 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವಂತಹ ಹಣ್ಣೆಂದರೆ ಅದು ಕಲ್ಲಂಗಡಿ ಹಣ‍್ಣು . ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

ಕಲ್ಲಂಗಡಿ ಹಣ್ಣನಲ್ಲಿ ನೀರಿನಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ  ತುಂಬಾ ಒಳ್ಳೆಯದು. ಇದು ದೇಹವನ್ನು ಹೈಡ್ರೀಕರಿಸುತ್ತದೆ. ದೇಹವನ್ನು ತಂಪಾಗಿಸುತ್ತದೆ. ಆದರೆ ಇದನ್ನು ಮಾತ್ರ ಸರಿಯಾದ ಸಮಯದಲ್ಲಿ ಸೇವಿಸಬೇಕು.

ಅಂದರೆ ಕಲ್ಲಂಗಡಿ ಹಣ್ನನ್ನು ಬೆಳಿಗ್ಗೆ ಹಾಗೂ ರಾತ್ರಿಯ ವೇಳೆ ಸೇವಿಸಬಾರದು. ಯಾಕೆಂದರೆ ಆ ವೇಳೆಯಲ್ಲಿ ವಾತಾವರಣ ತಂಪಾಗಿರುವುದರಿಂದ ಇದರಿಂದ ಶೀತ ,ಕಫದ ಸಮಸ್ಯೆ ಕಾಡಬಹುದು. ಹಾಗಾಗಿ ಬೆಳಿಗ್ಗೆ 11 ಗಂಟೆಯ ನಂತರ ಮಧ್ಯಾಹ್ನ 3 ಗಂಟೆಯೊಳಗೆ ಸೇವಿಸಿದರೆ ತುಂಬಾ ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ