ಮಿಲನ ಕ್ರಿಯೆ ಬಳಿಕ ಈ ಕೆಲಸ ತಪ್ಪದೇ ಮಾಡಬೇಕು!

ಗುರುವಾರ, 15 ನವೆಂಬರ್ 2018 (09:14 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಇಬ್ಬರ ನಡುವೆ ಕೇವಲ ಕರ್ತವ್ಯ, ವ್ಯವಹಾರದಂತೆ ಇರಬಾರದು. ಅದು ಇಬ್ಬರಿಗೂ ಖುಷಿಕೊಡಬೇಕು. ಹಾಗಿದ್ದರೆ ಮಿಲನ ಕ್ರಿಯೆ ಬಳಿಕ ಮಾಡಲೇಬೇಕಾದ ಕೆಲಸವೇನು ತಿಳಿದುಕೊಳ್ಳಿ.

ಕ್ಲೀನ್ ಅಪ್
ಮಿಲನ ಕ್ರಿಯೆ ಬಳಿಕ ಇಬ್ಬರೂ ತಮ್ಮ ದೇಹದ ಶುಚಿತ್ವದ ಬಗ್ಗೆ ಗಮನಕೊಡುವುದು ಒಳ್ಳೆಯದು. ಅದರಲ್ಲೂ ಮಹಿಳೆಯರು ಸೆಕ್ಸ್ ಬಳಿಕ 15 ನಿಮಿಷದೊಳಗೆ ಮೂತ್ರಿಸುವುದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ತಪ್ಪಿಸಬಹುದು.

ರಮಿಸುವುದು
ಸೆಕ್ಸ್ ಎನ್ನುವುದು ಮೊದಲೇ ಹೇಳಿದಂತೆ ವ್ಯವಹಾರವಲ್ಲ. ಸೆಕ್ಸ್ ಬಳಿಕ ಸಂಗಾತಿಯನ್ನು ರಮಿಸುವುದು, ಕೆಲ ಹೊತ್ತು ರೊಮ್ಯಾನ್ಸ್ ಮಾಡುವುದರಿಂದ ಇಬ್ಬರೂ ಪರಸ್ಪರ ಮತ್ತಷ್ಟು ಮಾನಸಿಕವಾಗಿಯೂ ಹತ್ತಿರವಾಗುತ್ತೀರಿ.

ಮಾತುಕತೆ
ಮಿಲನ ಕ್ರಿಯೆ ಸಂದರ್ಭ ವಿಪರೀತ ಮಾತನಾಡುವುದರಿಂದ ಮೂಡ್ ಹಾಳಾಗಬಹುದು. ಆದರೆ ಸೆಕ್ಸ್ ಬಳಿಕ ಇಬ್ಬರೂ ತಮ್ಮ ಖುಷಿ ಹಂಚಿಕೊಳ್ಳುವುದು, ಹೇಗಿದ್ದರೆ ಇಷ್ಟ, ಏನು ಕಷ್ಟ ಎಂದು ಪರಸ್ಪರ ಹಂಚಿಕೊಂಡರೆ ಮುಂದಿನ ಬಾರಿ ಮತ್ತಷ್ಟು ಸುಮಧುರ ಸಂಬಂಧ ನಿಮ್ಮದಾಗಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ