ಕತ್ತರಿಸಿ ಆಪಲ್ ಅಥವಾ ತರಕಾರಿ ಕಪ್ಪಗಾಗದಂತೆ ತಡೆಯಲು ಇಲ್ಲಿದೆ ಉಪಾಯ
ಭಾನುವಾರ, 11 ನವೆಂಬರ್ 2018 (09:48 IST)
ಬೆಂಗಳೂರು: ಆಪಲ್, ಆಲೂಗಡ್ಡೆಯಂತಹ ತರಾಕರಿಗಳು ಕತ್ತರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಕಪ್ಪಗಾಗುತ್ತವೆ. ಇದನ್ನು ತಡೆಯಲು ಇಲ್ಲಿದೆ ಉಪಾಯ.
ಹರಿಯುವ ನೀರಿನಲ್ಲಿ ತೊಳೆಯಿರಿ
ಆಪಲ್ ಅಥವಾ ಕಪ್ಪಗಾಗುವಂತಹ ತರಕಾರಿಗಳನ್ನು ಹರಿಯುವ ನೀರಿನಲ್ಲಿ ತೊಳೆದುಕೊಳ್ಳಿ. ಇದು ಬಣ್ಣ ಮಾಸುವಿಕೆಯನ್ನು ತಡೆಯುತ್ತದೆ.
ಹುಳಿ ನೀರು
ನಿಂಬೆಯಂತಹ ಹುಳಿ ಮಿಶ್ರಿತ ಸಿಟ್ರಕ್ ದ್ರಾವಣದಲ್ಲಿ ಇಂತಹ ಹಣ್ಣು, ತರಕಾರಿಗಳನ್ನು ನೆನೆಸಿಡಿ. ಇದರಿಂದ ಕಪ್ಪಗಾಗದು.
ಉಪ್ಪು ನೀರು
ಕತ್ತರಿಸಿದ ಬಳಿಕ ಉಪ್ಪು ನೀರಿನಲ್ಲಿ ಅದ್ದಿ ತೆಗೆದರೆ ಬಣ್ಣ ಮಾಸದು.
ಜೇನು ತುಪ್ಪ
ಹಣ್ಣುಗಳಾದರೆ ಉಪ್ಪು ನೀರಿನಲ್ಲಿ ಅದ್ದಿದರೆ ರುಚಿಗೆಡುತ್ತದೆ ಎಂದಾದರೆ ಜೇನು ತುಪ್ಪದಲ್ಲಿ ನೆನೆಸಿಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.