ಶೂ ಧರಿಸಿದ್ದರಿಂದ ಉಂಟಾಗುವ ದುರ್ವಾಸನೆಯನ್ನು ಹೋಗಲಾಡಿಸಲು ಈ ರೀತಿ ಮಾಡಿ
ಗುರುವಾರ, 16 ಮೇ 2019 (06:52 IST)
ಬೆಂಗಳೂರು : ಯಾವಾಗಲೂ ಶೂ ಧರಿಸುವುದರಿಂದ ಕಾಲು ಹಾಗೂ ಪಾದ ವಾಸನೆಯಿಂದ ಕೂಡಿರುತ್ತದೆ. ಈ ವಾಸನೆ ನಮ್ಮ ಜೊತೆ ಕುಳಿತ ಬೇರೆಯವರಿಗೆ ತೊಂದರೆಯನ್ನುಂಟುಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಉಪಾಯ.
*ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್‌ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್ ಗೆ ಸುರಿದು, ಅದಕ್ಕೆ ಸ್ವಲ್ಪ ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
*ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ದುರ್ವಾಸನೆ ತಡೆಯುವ ಮದ್ಯ ಹಾಕಿ ಪಾದಕ್ಕೆ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.
* ಟೀ ಬ್ಯಾಗ್ ಟ್ರೀಟ್‌ಮೆಂಟ್ ರೀತಿಯಲ್ಲೇ ಸ್ವಲ್ಪ ಮೌತ್ ವಾಶ್ ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.