ಬೆಂಗಳೂರು : ಶೇಂಗಾ ಕಾಳು ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಅದರಲ್ಲಿ ಒಂದಾದ ಶೇಂಗಾ ಪಲ್ಯ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮಾಡುವ ವಿಧಾನ : ಶೇಂಗಾವನ್ನು ಕುಕ್ಕರ್ ನಲಲ್ಇ 1 ವಿಶಲ್ ಹಾಕಿ ಬೇಯಿಸಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಹಾಕಿ ಹುರಿದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಟೊಮೆಟೊ, ಶೇಂಗಾ ಹಾಕಿ ಮತ್ತೆ ಹುರಿಯಿರಿ. ನಂತರ ಅದಕ್ಕೆ ಉಪ್ಪು, ಅರಿಶಿನ ಮತ್ತು ಮಸಾಲ ಖಾರದ ಪುಡಿ, ಹುಣಸೆ ರಸ, ಬೆಲ್ಲ ಹಾಕಿ ಕುದಿಸಿ ಇಳಿಸಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಸೇಂಗಾ ಪಲ್ಯ ರೆಡಿ.