ಬೆಂಗಳೂರು : ಪೆಡಿಕ್ಯೂರ್ ಮಾಡಿಕೊಳ್ಳಲು ಕೆಲವರು ಬ್ಯೂಟಿ ಪಾರ್ಲರ್ ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಅದರ ಬದಲು ಮನೆಯಲ್ಲಿಯೇ ಅದನ್ನು ಮಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಒದು ಬಕೆಟ್ ಬಿಸಿ ನೀರು ತೆಗೆದುಕೊಂಡು ಅದಕ್ಕೆ 1 ನಿಂಬೆ ಹಣ್ಣಿನ ರಸ, 2 ಚಮಚ ಸೋಡಾ, 2 ಚಮಚ ಕ್ರಿಸ್ಟಲ್ ಸಾಲ್ಟ್ ನ್ನು ಹಾಕಿ. ಅದಕ್ಕೆ 3 ಚಮಚ ಶಾಂಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕಾಲನ್ನು ಅದರಲ್ಲಿ 10 ನಿಮಿಷ ಇಟ್ಟುಕೊಳ್ಳಿ. ಬಳಿಕ ಕಾಲನ್ನು ಚೆನ್ನಾಗಿ ಒರೆಸಿಕೊಂಡು ಅದಕ್ಕೆ ಮೊಸರು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ವಾಶ್ ಮಾಡಿ.