ರುಚಿಕರವಾದ ಮಶ್ರೂಮ್ ಆಮ್ಲೇಟ್ ಮಾಡುವುದು ಹೇಗೆ ಗೊತ್ತಾ?

ಭಾನುವಾರ, 3 ನವೆಂಬರ್ 2019 (10:55 IST)
ಬೆಂಗಳೂರು : ಆಮ್ಲೇಟ್ ಎಂದರೆ ಎಲ್ಲರಿಗೂ ಇಷ್ಟ. ಅದರ ರುಚಿ ಇನ್ನಷ್ಟು ಹೆಚ್ಚಿಸಲು ಮಶ್ರೂಮ್ ಮಿಕ್ಸ್ ಮಾಡಿದ ಆಮ್ಲೇಟ್ ಮಾಡಿ ತಿನ್ನಿ. ಇದು ಮತ್ತಷ್ಟು ಟೇಸ್ಟಿಯಾಗಿರುತ್ತದೆ.



ಬೇಕಾಗುವ ಸಾಮಾಗ್ರಿಗಳು: 4 ಮೊಟ್ಟೆ, ಮಶ್ರೂಮ್(ಅಣಬೆ) 1 ಪ್ಯಾಕ್, 1 ಚಿಟಿಕೆ ಗರಂಮಸಾಲ, ರುಚಿಗೆ ತಕಷ್ಟು ಉಪ್ಪು, ಈರುಳ್ಳಿ 1, ಕಾಳು ಮೆಣಸಿನ ಪುಡಿ 1 ಚಮಚ, ಚೀಸ್ 1 ತುಂಡು, ಬೆಣ್ಣೆ 2 ಚಮಚ

 

ಮಾಡುವ ವಿಧಾನ :

ಮೊದಲಿಗೆ ಒಂದು ಪಾತ್ರೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಅಣಬೆ, ಉಪ್ಪು, ಗರಂಮಸಾಲ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಒಂದು ಕಪ್  ನಲ್ಲಿ ಮೊಟ್ಟೆ ಹಾಕಿ ಅದಕ್ಕೆ ಹೆಚ್ಚಿಟ್ಟ ಈರುಳ‍್ಳಿ, ಉಪ್ಪು ಮತ್ತು  ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಬೇಕು. ಬಳಿಕ ತವಾವನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ ಮೊಟ್ಟೆ ಮಿಶ್ರಣವನ್ನು ಹಾಕಿ, ಅದು ಸ್ವಲ್ಪ ಬೇಯುತ್ತಿರುವಾಗ ಅದಕ್ಕೆ ಬೇಯಿಸಿದ ಅಣಬೆಯನ್ನು ಹಾಕಿ ಅದರ ಮೇಲೆ ಚೀಸ್ ಹಾಕಿ. ಹೀಗೆ ಮಾಡಿದರೆ ರುಚಿಕರವಾದ ಮಶ್ರೂಮ್ ಆಮ್ಲೇಟ್ ರೆಡಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ