ಸಕ್ಕರೆಯಿಂದ ತಲೆಹೊಟ್ಟನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?

ಶುಕ್ರವಾರ, 19 ಜುಲೈ 2019 (07:00 IST)
ಬೆಂಗಳೂರು : ಸಕ್ಕರೆ ತಿನ್ನಲು ಸಿಹಿಯಾಗಿರುತ್ತದೆ. ಇದರಿಂದ ಅನೇಕ ವಿಧದ ಸಿಹಿತಿಂಡಿಗಳನ್ನು ಮಾಡಬಹುದು. ಅಷ್ಟೇ ಅಲ್ಲ ಇದರಿಂದ ತಲೆಯ ಹೊಟ್ಟನ್ನು ಕೂಡ ನಿವಾರಿಸಬಹುದು. 




*ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು ಜತೆ ಸೇರಿಸಿ ಸ್ಕ್ರಬ್ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಗೆ ಬಿಡಿ. ಇದರ ಬಳಿಕ  ನೀರಿನಿಂದ ತೊಳೆಯಿರಿ. ತಲೆಬುರುಡೆಯಲ್ಲಿರುವ ದದ್ದುಗಳು ಮತ್ತು ತಲೆಹೊಟ್ಟನ್ನು ಇದು ನಿವಾರಿಸುವುದು


* ಸಕ್ಕರೆ ಮತ್ತು ಅಲೋವೆರಾ ಅಲೋವೆರಾದಲ್ಲಿ ಶಮನಕಾರಿ ಗುಣಗಳಿವೆ ಮತ್ತು ಇದು ಒಣತಲೆಬುರುಡೆ ಮತ್ತು ತಲೆಹೊಟ್ಟನ್ನು ನಿವಾರಿಸಲು ನೆರವಾಗುವುದು. ಅಲೋವೆರಾ ಜೆಲ್ ಗೆ ಸಕ್ಕರೆ ಪುಡಿಯನ್ನು ಮಿಕ್ಸ್ ಮಾಡಿ ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸ್ಕ್ರಬ್ ಮಾಡಿ. 30 ನಿಮಿಷ ಬಿಟ್ಟು ತೊಳೆಯಿರಿ.


*. 2 ಚಮಚ ಆಲಿವ್ ತೈಲವನ್ನು ಸ್ವಲ್ಪ ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ. 30-45 ನಿಮಿಷ ಕಾಲ ಹಾಗೆ ಬಿಡಿ.  ನೀರಿನಿಂದ ತೊಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ