ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ?

ಭಾನುವಾರ, 2 ಸೆಪ್ಟಂಬರ್ 2018 (14:54 IST)
ಬೆಂಗಳೂರು : ಊಟವಾದ ಬಳಿಕ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತಿರುವ ಅಂಶ. ಆದರೆ ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ


ಡಿನ್ನರ್ ಬಳಿಕ ಬಾಳೆಹಣ್ಣುತಿನ್ನುವುದರಿಂದ ಕೆಲವರಿಗೆ ಕೆಮ್ಮು ಹಾಗೂ ಶೀತ ಉಂಟಾಗುವುದು. ಅಲ್ಲದೆ ರಾತ್ರಿ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಆದರೆ ಸಂಜೆ ಜಿಮ್ ವರ್ಕೌಟ್‌ ಬಳಿಕ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಅಸ್ತಮಾ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ಶೀತ ಹೆಚ್ಚಾಗುವುದು.


 ಸ್ಟ್ರೀಟ್‌ ಫುಡ್‌ ತಿಂದಾಗ ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿ ಕಂಡು ಬರುತ್ತದೆ. ಇದನ್ನು ತಡೆಯಲು ಸ್ಟ್ರೀಟ್‌ ಫುಡ್ ಬಳಿಕ ಬಾಳೆಹಣ್ಣು ತಿನ್ನವುದು ಒಳ್ಳೆಯದು. ರಾತ್ರಿ ಎರಡು ಬಾಳೆಹಣ್ಣು ತಿಂದರೆ ಸ್ವಲ್ಪ ಹೊತ್ತಿನಲ್ಲಿಯೇ ಕಣ್ಣಿಗೆ ನಿದ್ದೆ ಹತ್ತುವುದು.


ಆದರೆ ಬಾಳೆಹಣ್ಣು ತಿಂದರೆ ತೂಕ ಹೆಚ್ಚುವುದೇ ಎಂಬ ಭಯ ಹಲವರಲಿದೆ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಮತ್ತಷ್ಟು ಬಲ ತುಂಬುತ್ತದೆಯೇ ಹೊರತು ಮೈಕೊಬ್ಬು ಹೆಚ್ಚಿಸುವುದಿಲ್ಲ. ಡಯಟ್‌ ಮಾಡುವವರು ರಾತ್ರಿ ಒಂದು ಬಾಳೆಹಣ್ಣು ಹಾಗೂ ಒಂದು ಲೋಟ ಹಾಲು ಕುಡಿದು ಮಲಗಿದರೆ ಮೈ ತೂಕ ಹೆಚ್ಚುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ