ಬೆಂಗಳೂರು : ಬೆಳ್ಳುಳ್ಳಿ ತಿಂದರೆ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಬೆಳ್ಳುಳ್ಳಿಯನ್ನು ಅತಿಯಾಗಿ ತಿಂದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
*ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ವಾಕರಿಕೆ ಹಾಗೂ ವಾಂತಿ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.
*ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿಂದರೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
*ಯೋನಿ ಈಸ್ಟ್ ಸೋಂಕು ಇರುವವರು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಬಾರದು. ಸೋಂಕು ಹೆಚ್ಚಾಗಿ ಯೋನಿಯ ಕೋಮಲ ಅಂಗಾಂಶಗಳನ್ನು ಕಿರಿಕಿರಿಗೆ ಕಾರಣವಾಗಬಹುದು.
*ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಕಣ್ಣಿನ ಐರಿಸ್ ಹಾಗೂ ಕಾರ್ನಿಯಾ ಮಧ್ಯದ ಖಾಲಿ ಜಾಗದಲ್ಲಿ ರಕ್ತಸ್ರಾವ ಉಂಟಾಗಬಹುದು. ಇದರಿಂದ ಕಣ್ಣು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.