ಹುಳಿಯನ್ನು ರಾತ್ರಿಯ ಸಮಯದಲ್ಲಿ ಹೆಚ್ಚು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಶನಿವಾರ, 2 ಜನವರಿ 2021 (09:55 IST)
ಬೆಂಗಳೂರು : ಆಹಾರದಲ್ಲಿ ಉಪ್ಪು ಹುಳಿ ಖಾರ ಸಮವಾಗಿದ್ದರೆ ಆ ಆಹಾರದ ರುಚಿ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಹಾಗೇ ಹೆಚ್ಚಿನವರು ಹುಳಿಯನ್ನು ತಿನ್ನಲು ಇಷ್ಟಪಡುತ್ತಾರೆ. ಹುಳಿ ದೇಹಕ್ಕೆ ಒಳ್ಳೆಯದಾದರೂ ಇದನ್ನು ಮಿತವಾಗಿ ಸೆವಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ಹುಳಿಯನ್ನು ರಾತ್ರಿಯ ಸಮಯದಲ್ಲಿ ಹೆಚ್ಚು ಸೇವಿಸಬೇಡಿ.

ಹೌದು, ನೆಲ್ಲಿಕಾಯಿಯಂತಹ ಹುಳಿ ಅಂಶವನ್ನು ರಾತ್ರಿಯಲ್ಲಿ ಸೇವಿಸಿಬಾರದು ಯಾಕೆಂದರೆ ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ನಮ್ಮ ದೇಹದಲ್ಲಿ ಕೂಡ ವಿಟಮಿನ್ ಸಿ ಅಧಿಕವಾಗಿದ್ದರೆ ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಕಾಡುತ್ತದೆ. ಅಲ್ಲದೇ ರಾತ್ರಿ ವೇಳೆ ಹುಳಿ ಸೇವನೆಯಿಂದ ಅಸಿಡಿಟಿ, ಕಫ, ರಕ್ತ ಸಂಬಂಧಿತ ಕಾಯಿಲೆಗಳು, ದೇಹದಲ್ಲಿ ಊತ, ನೋವು ಕಾಣಿಸಿಕೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ