ಬೆಂಗಳೂರು : ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಪಪ್ಪಾಯ ಗಿಡದ ಎಲೆಗಳಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಹಾಗಾದರೆ ಪಪ್ಪಾಯ ಹೂವನ್ನು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪಪ್ಪಾಯ ಹೂ ಕಹಿಯಾಗಿರುವುದರಿಂದ ಇದನ್ನು ಸೇವಿಸಲು ಯಾರು ಇಷ್ಟಪಡುವುದಿಲ್ಲ. ಆದರೆ ಇದರಿಂದ ಚಟ್ನಿ, ಪಲ್ಯ, ಸಾಂಬಾರ್ ತಯಾರಿಸಿ ತಿನ್ನಬಹುದು. ಇದರಿಂದ ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ. ರಕ್ತದೊತ್ತೆವನ್ನು ನಿಯಂತ್ರಿಸುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ದೇಹದ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ ಎನ್ನಲಾಗಿದೆ.