ಗೆಣಸನ್ನು ಅತಿಯಾಗಿ ಬೇಯಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಬುಧವಾರ, 25 ನವೆಂಬರ್ 2020 (06:16 IST)
ಬೆಂಗಳೂರು : ಸಾಮಾನ್ಯವಾಗಿ ಗೆಣಸು ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಸಿಯಾಗಿಯೂ ಹಾಗೂ ಬೇಯಿಸಿ ಸೇವಿಸಬಹುದು. ಆದರೆ ಸರಿಯಾಗಿ ಬೇಯಿಸಿದರೆ ಮಾತ್ರ ಅದರ ಪೌಷ್ಟಿಕಾಂಶ ನಿಮಗೆ ಸಿಗುತ್ತದೆ. ಇಲ್ಲವಾದರೆ ಅದರಿಂದ ಅನಾರೋಗ್ಯ ಸಂಭವಿಸಬಹುದು. ಹಾಗಾದ್ರೆ ಸಿಹಿ ಆಲೂಗಡ್ಡೆಯನ್ನು ಎಷ್ಟು ಸಮಯ ಬೇಯಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಗೆಣಸನ್ನು 30 ನಿಮಿಷಗಳಿಗಿಂತ ಹೆಚ್ಚು ಕಾಲ ಬೇಯಿಸಬೇಡಿ. ಇದರಲ್ಲಿ ನೈಸರ್ಗಿಕ ನೀರು, ಫೈಬರ್ ಅಧಿಕವಾಗಿದೆ. ಇದರಿಂದಾಗಿ ಅದು 10 15 ನಿಮಿಷದಲ್ಲಿ ಬೇಯುತ್ತದೆ. ಹೆಚ್ಚು ಕಾಲ ಅಂದರೆ 20 ನಿಮಿಷ ಬೇಯಿಸಬಹುದು.

ಒಂದು ವೇಳೆ ನೀವು 30 ನಿಮಷಗಿಂತ ಹೆಚ್ಚು ಕಾಲ ಬೇಯಿಸಿದರೆ ಅದರಲ್ಲಿರುವ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಾಗಬಹುದು. ಇದನ್ನು ಸೇವಿಸದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ