ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಕಿರಣಗಳಿಂದ ಚರ್ಮವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಸನ್ ಸ್ಕ್ರೀನ್ ಅನ್ನು ಬಳಸುತ್ತಾರೆ. ಆದರೆ ಅತಿಯಾಗಿ ಸನ್ ಸ್ಕ್ರೀನ್ ಬಳಸುವುದು ಉತ್ತಮವಲ್ಲ. ಇದರಿಂದ ಈ ಸಮಸ್ಯೆಗಳು ಕಾಡುತ್ತವೆಯಂತೆ.
ಸಂಶೋಧನೆಯ ಪ್ರಕಾರ ಅತಿಯಾಗಿ ಸನ್ ಸ್ಕ್ರೀನ್ ಬಳಸಿದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯುಂಟಾಗುತ್ತದೆ. ಸನ್ ಸ್ಕ್ರೀನ್ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವ ಚರ್ಮದ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ವಿಟಮಿನ್ ಡಿ ನಮ್ಮ ದೇಹಕ್ಕೆ ಸಿಗುವುದಿಲ್ಲ. ಇದರಿಂದ ಮೂಳೆಗಳ ಸಮಸ್ಯೆ ಕಾಡುತ್ತದೆ.
ವಿಟಮಿನ್ ಡಿ ಪ್ರಮುಖ ಪೋಷಕಾಂಶವಾಗಿದ್ದು, ಇದು ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ನಿಯಮಿತವಾಗಿಡಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಹೀರಿಕೊಂಡು ಮೂಳೆಗಳನ್ನು ಬಲಪಡಿಸುತ್ತದೆ.