ಬೆಂಗಳೂರು : ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಅದನ್ನು ಸಿಪ್ಪೆ ಸಹಿತವಾಗಿ ತಿಂದರೆ, ಕೆಲವರು ಸಿಪ್ಪೆ ಎಸೆಯುತ್ತಾರೆ. ಅದರ ಸಿಪ್ಪೆ ತಿನ್ನುವುದರಿಂದ ಏನಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ದ್ರಾಕ್ಷಿ ಹಣ್ಣಿನ ಸಿಪ್ಪೆಯಲ್ಲಿ ರೆಸ್ವೆರಾಟ್ರೋಲ್ ಎಂಬ ಅಂಶವಿದೆ. ಇದು ದೇಹದ ಅಂಗಾಂಶಗಳ ಹಾನಿಯನ್ನು ತಪ್ಪಿಸುತ್ತದೆ. ಚರ್ಮದ ಮೇಲೆ ಕಂಡು ಬರುವ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಮತ್ತು ಸೂರ್ಯನ ವಿಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.
ಅಲ್ಲದೇ ಸಂಶೋಧನೆಗಳ ಪ್ರಕಾರ ಮಹಿಳೆಯರ ದೇಹದಲ್ಲಿ ಹೊಟ್ಟೆಯ ಭಾಗದಲ್ಲಿ ಕರುಳು, ಲಿವರ್ ಮತ್ತು ಸ್ತನಗಳ ಭಾಗದಲ್ಲಿ ಬೆಳವಣೆಗೆಯಾಗುವ ಕ್ಯಾನ್ಸರ್ ಟ್ಯೂಮರ್ ಗಳನ್ನು ಇದು ನಿವಾರಿಸುತ್ತದೆ.