ಕೆಂಪು ಮಾಂಸ ಹಾಗೂ ಬಿಳಿ ಮಾಂಸದಲ್ಲಿ ಯಾವುದು ಆರೋಗ್ಯಕಾರಿ ಎಂಬುದು ಗೊತ್ತಾ?

ಭಾನುವಾರ, 2 ಜೂನ್ 2019 (06:57 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಕೆಂಪು ಮಾಂಸ ಹಾಗೂ ಬಿಳಿ ಮಾಂಸ ಎರಡು ದೊರೆಯುತ್ತದೆ. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕಾರಿ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.




ಕುರಿ, ಆಡು ಮತ್ತು ಹಂದಿ ಮಾಂಸವನ್ನು ಕೆಂಪು ಮಾಂಸ ಎಂದು ಪರಿಗಣಿಸಲಾಗಿದೆ. ಕೆಂಪು ಮಾಂಸದಲ್ಲಿ ಸತು, ಕಬ್ಬಿನಾಂಶ, ಬಿ6 ಮತ್ತು ವಿಟಮಿನ್ ಬಿ12, ಥೈಮೆನ್ ಮತ್ತು ರಿಬೊಫ್ಲಾವಿನ್ ಹೆಚ್ಚಾಗಿ ಕೆಂಪು ಮಾಂಸದಲ್ಲಿ ಇರುವುದು. ಕೆಂಪು ಮಾಂಸ ಸೇವನೆ ಮಾಡಿದರೆ ಅದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಬಹುದು. ಆದರೆ ಇದರಲ್ಲಿ ಅಧಿಕ ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಇದೆ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುವ ಕಾರಣದಿಂದಾಗಿ ಇದು ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಸಮಸ್ಯೆ ಹೆಚ್ಚು ಮಾಡಬಹುದು. ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು.


ಕೋಳಿ, ಮೀನು ಮತ್ತು ಬಾತುಕೋಳಿ ಮಾಂಸವನ್ನು ಬಿಳಿ ಮಾಂಸ ಎಂದು ಪರಿಗಣಿಸಲಾಗಿದೆ. ಬಿಳಿ ಮಾಂಸದಲ್ಲಿ ತುಂಬಾ ಕಡಿಮೆ ಕ್ಯಾಲರಿ, ಕಡಿಮೆ ಕೊಬ್ಬು ಮತ್ತು ಕಡಿಮೆ ಸ್ಯಾಚುರೇಟೆಡ್ ಕೊಬ್ಬು ಇದೆ. ಆದ್ದರಿಂದ ಕೆಂಪು ಮಾಂಸಕ್ಕಿಂತ ಹೆಚ್ಚಾಗಿ ಬಿಳಿ ಮಾಂಸ ಸೇವಿಸಿದರೆ ಉತ್ತಮ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ