ಋತುಚಕ್ರದ ವೇಳೆ ಕಪ್ ಬಳಸುವ ಮಹಿಳೆಯರು ಬೇಗನೆ ಗರ್ಭ ಧರಿಸುತ್ತಾರಂತೆ
ಭಾನುವಾರ, 2 ಜೂನ್ 2019 (06:50 IST)
ಬೆಂಗಳೂರು : ಋತುಚಕ್ರದ ವೇಳೆ ಪ್ಯಾಡ್ ಅಥವಾ ಟ್ಯಾಂಪನ್ಸ್ ಬಳಸುವ ಬದಲು ಕಪ್ ಬಳಸಿದರೆ ಬೇಗನೆ ಗರ್ಭ ಧರಿಸಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಋತುಚಕ್ರದ ವೇಳೆ ಸಾಮಾನ್ಯವಾಗಿ ಪ್ಯಾಡ್ ಅಥವಾ ಟ್ಯಾಂಪನ್ಸ್ ಧರಿಸುತ್ತಾರೆ. ಆದರೆ ಸ್ವಚ್ಛತೆಯನ್ನು ಕಾಪಾಡಲು ಬಳಸುವ ಕಪ್ ಯೋನಿಯೊಳಗೆ ಇಡಲಾಗುತ್ತದೆ. ಇದು ಗರ್ಭಕಂಠದ ತನಕ ಹೋಗುತ್ತದೆ ಮತ್ತು ಬರುವಂತಹ ರಕ್ತವನ್ನು ಅದು ಜಮೆ ಮಾಡುವುದು. ರಕ್ತಸ್ರಾವಕ್ಕೆ ಅನುಗುಣವಾಗಿ ಇದನ್ನು ಕೇವಲ 10-12 ಗಂಟೆಗೊಮ್ಮೆ ಮಾತ್ರ ಬದಲಾಯಿಸಿಕೊಳ್ಳಬಹುದು.ಇದನ್ನು ಕ್ಲೀನ್ ಮಾಡುವುದು ತುಂಬಾ ಸುಲಭ.
ಆದರೆ ಋತುಚಕ್ರದ ವೇಳೆ ಕಪ್ ಧರಿಸುವಂತಹ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿ ಇರುವುದು ಎಂದು ವರದಿಗಳು ಹೇಳಿವೆ. ಲೈಂಗಿಕ ಕ್ರಿಯೆ ಬಳಿಕ ತಕ್ಷಣವೇ ಋತುಚಕ್ರದ ಕಪ್ ನ್ನು ಅಳವಡಿಸುವ ಕಾರಣದಿಂದಾಗಿ ವೀರ್ಯವು ಅಲ್ಲೇ ಹೋಗಿ ನಿಲ್ಲುವುದು. ಇದು ಗರ್ಭ ತೆರೆಯುವುದಕ್ಕೆ ತುಂಬಾ ಹತ್ತಿರವಾಗಿರುವುದು. ಡಾ. ಶೆರ್ರಿ ರೋಸ್ ಅವರು ಹೇಳುವ ಪ್ರಕಾರ ಇದು ನಿಜವಾಗಿಯೂ ಮಹಿಳೆಯ ಆರೋಗ್ಯಕ್ಕೆ ಒಂದು ಮಾರ್ಗದರ್ಶಿ. ಗರ್ಭಕ್ಕೆ ವೀರ್ಯವು ಎಷ್ಟು ಹತ್ತಿರವಾಗಿರುತ್ತದೋ ಅಷ್ಟು ಗರ್ಭ ಧರಿಸುವ ಸಾಧ್ಯತೆಯು ಇರುವುದು. ಗಾಳಿಗೆ ಒಡ್ಡಲ್ಪಡದೆ ಇರುವಂತಹ ವೀರ್ಯವು ಮಹಿಳೆಯ ದೇಹದಲ್ಲಿ ಸುಮಾರು 12 ಗಂಟೆಗಳ ಕಾಲ ಹಾಗೆ ಇರುತ್ತದೆ.