ಉತ್ತಮ ಆರೋಗ್ಯಕ್ಕಾಗಿ ಸೇಬು ಹಣ್ಣನ್ನು ಯಾವಾಗ ಸೇವಿಸಬೇಕು ಗೊತ್ತಾ?

ಶುಕ್ರವಾರ, 19 ಫೆಬ್ರವರಿ 2021 (06:25 IST)
ಬೆಂಗಳೂರು : ಸೇಬು ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದೆ. ದಿನಕ್ಕೆ ಒಂದು ಸೇಬು ತಿಂದರೆ ವೈದ್ಯ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಸೇಬು ಹಣ್ಣನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸೇಬುಹಣ್ಣನ್ನು ಸರಿಯಾಗಿ ಸೇವಿಸಿದರೆ ಅದರ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಸೇಬುಹಣ್ಣನ್ನು ಬೆಳಿಗ್ಗೆ ಉಪಹಾರ ಮಾಡಿದ 1 ಗಂಟೆಯ ಬಳಿಕ ಸೇವಿಸಿದರೆ ತುಂಬಾ ಒಳ್ಳೆಯದು. ಹಾಗೇ ಸೇಬನ್ನು ಸಿಪ್ಪೆಯ ಸಹಿತವಾಗಿ ಸೇವಿಸಿ

ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಮತ್ತು ಊಟವಾದ ಬಳಿಕ ಸೇಬು ತಿಂದರೆ ಜಿರ್ಣ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ರಾತ್ರಿ ಸೇಬನ್ನು ಸೇವಿಸಿದರೆ ಕಫದ ಸಮಸ್ಯೆ ಉಂಟುಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ