ಬೆಳಗಿನ ವಾಕಿಂಗ್ ನಲ್ಲಿ ನೀವು ಈ ತಪ್ಪು ಮಾಡುತ್ತೀರಾ? ಹಾಗಿದ್ರೆ, ನಿಮಗೆ ಈ ಸಮಸ್ಯೆ ತಪ್ಪಿದಲ್ಲ!

ಭಾನುವಾರ, 26 ಸೆಪ್ಟಂಬರ್ 2021 (07:08 IST)
ಬೆಳಗಿನ ವಾಕ್ ಮಾಡುವಾಗ ಹೆಚ್ಚಿನ ಜನರು ಮೊಬೈಲ್ ಫೋನ್ ಬಳಸುತ್ತಾರೆ, ಆದರೆ ಇದು ನಿಮಗೆ ಎಷ್ಟು ಹಾನಿಯನ್ನುಂಟು ಮಾಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಬೆಳಗ್ಗೆ ವಾಕಿಂಗ್ ಮಾಡುವಾಗ ಕೆಲವರು ಹಾಡುಗಳನ್ನು ಕೇಳುತ್ತಾರೆ, ಅನೇಕ ಬಾರಿ ಜನರು ಫೋನಿನಲ್ಲಿ ಮಾತನಾಡುತ್ತಾ ನಡೆಯುತ್ತಾರೆ.

ತಜ್ಞರ ಪ್ರಕಾರ, ಮುಂಜಾನೆ ವಾಕ್ ಮಾಡುವಾಗ ಫೋನ್ ಬಳಕೆಯ ಅಭ್ಯಾಸವು ನಿಮ್ಮನ್ನು ದೊಡ್ಡ ಸಮಸ್ಯೆಗಳಿಗೆ ಸಿಲುಕಿಸುತ್ತದೆ. ಅದು ನಿಮಗೆ ಹೇಗೆ ಹೆಚ್ಚು ಅರೊಗ್ಯ ಹಾನಿ ಮಾಡುತ್ತದೆಎಂದು ಹೇಳಿದ್ದಾರೆ.
ಕಳಪೆ ದೇಹದ ಭಂಗಿ
ಫೋನಿನ ಬಳಕೆಯು ದೇಹದ ಭಂಗಿಯ ಮೇಲೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ನಡೆಯುವಾಗ ಬೆನ್ನುಹುರಿ ಯಾವಾಗಲೂ ನೇರವಾಗಿರಬೇಕು. ನೀವು ಮೊಬೈಲ್ ಬಳಸುವಾಗ ಗಮನವೆಲ್ಲ ಫೋನಿನ ಮೇಲಿರುತ್ತದೆ. ಬೆನ್ನುಹುರಿ ನೇರವಾಗಿ ಉಳಿಯುವುದಿಲ್ಲ. ನೀವು ದೀರ್ಘಕಾಲ ಈ ರೀತಿ ನಡೆದರೆ, ಅದು ದೇಹದ ಭಂಗಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಸ್ನಾಯು ನೋವು
ವಾಕಿಂಗ್ ಮಾಡುವಾಗ, ನಿಮ್ಮ ಇಡೀ ದೇಹವು ಸಕ್ರಿಯವಾಗಿದೆ ಮತ್ತು ಇಡೀ ದೇಹ ವ್ಯಾಯಾಮದಲ್ಲಿ ನಿರತವಾಗಿರುತ್ತದೆ, ಆದರೆ ನೀವು ಮೊಬೈಲ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು ನಡೆದರೆ, ಅದು ಸ್ನಾಯುಗಳಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ ಸ್ನಾಯುಗಳಲ್ಲಿ ನೋವು ಉಂಟಾಗಬಹುದು.
ಏಕಾಗ್ರತೆಯನ್ನ ಕಳೆದುಕೊಳ್ಳುತ್ತೀರಿ
ಬೆಳಗಿನ ವಾಕಿಂಗ್ ನಲ್ಲಿ ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಗಮನವು ಸಂಪೂರ್ಣವಾಗಿ ವಾಕ್ ಕಡೆಗೆ ಇರುವುದಿಲ್ಲ. ಈ ಸಂಗತಿಯುವು ನಿಮ್ಮನ್ನು ಸಮಸ್ಯೆಗಳ ಸುಳಿಗೆ ತಳ್ಳುತ್ತದೆ. ಈ ರೀತಿ ನಡೆಯುವುದರಿಂದ, ನೀವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ.
ಬೆನ್ನು ನೋವು
ನೀವು ಬೆಳಗಿನ ವಾಕಿಂಗ್ ನಲ್ಲಿ ಈ ಅಭ್ಯಾಸವನ್ನು ದೀರ್ಘಕಾಲ ನಿರ್ವಹಿಸಿದರೆ, ಅದು ಬೆನ್ನು ನೋವನ್ನು ಉಂಟುಮಾಡಬಹುದು. ವಾಕಿಂಗ್ ಮಾಡುವಾಗ ಮೊಬೈಲ್ ಬಳಸಬೇಡಿ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ