ಗೆಳೆಯನ ಜೊತೆ ವಾಕಿಂಗ್ ಮಾಡುತ್ತಿದ್ದ ಹುಡುಗಿಗೆ ನಾಲ್ವರು ಯುವಕರು ಮಾಡಿದ್ದೇನು?

ಸೋಮವಾರ, 7 ಡಿಸೆಂಬರ್ 2020 (07:29 IST)
ಕೋಲ್ಕತ್ತಾ : ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಹದಿಹರೆಯದ ಹುಡುಗಿಯನ್ನು ನಾಲ್ವರು ಯುವಕರು ಹಿಂಬಾಲಿಸಿ ಸಾಮೂಹಿಕ ಮಾನಭಂಗ ಮಾಡಿದ್ದಾರೆ.

ಸಂಜೆಯ ವೇಳೆ ಬಾಲಕಿ ತನ್ನ ಸ್ನೇಹಿತನ ಜಿತೆ ವಾಕಿಂಗ್ ಮಾಡುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಬಂದ ಯುವಕರು  ಆಕೆಯ ಸ್ನೇಹಿತನಿಗೆ ಥಳಿಸಿ ಆಕೆಯ ಮೇಲೆ ಮಾನಭಂಗ ಎಸಗಿದ್ದಾರೆ. ಹುಡುಗಿಯ ಕೂಗಾಟ ಕೇಳಿ ಅಲ್ಲಿಗೆ ಬಂದ ಪೊಲೀಸ್ ಗಸ್ತು ತಂಡ ಆಕೆಯನ್ನು ರಕ್ಷಿಸಿದ್ದಾರೆ.

ಬಳಿಕ ಹುಡುಗಿ ನಡೆದ ಘಟನೆಯನನ್ನು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದು, ಇನ್ನುಳಿದವರನ್ನು ಬಂಧಿಸಲು ತಂಡ ರಚಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ