ಪ್ರತಿದಿನ ದೇವರಿಗೆ ಉದುಬತ್ತಿ ಹಚ್ಚುತ್ತಿದ್ದೀರಾ? ಹಾಗಾದ್ರೆ ಈ ಸಮಸ್ಯೆಗಳು ಬರುವುದು ಖಂಡಿತ
ಗುರುವಾರ, 13 ಸೆಪ್ಟಂಬರ್ 2018 (11:36 IST)
ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ಮನೆಯಲ್ಲಿ ದೇವರ ಪೂಜೆ ಮಾಡಿ ಉದುಬತ್ತಿ ಹಚ್ಚುತ್ತಾರೆ. ಇದರಿಂದ ದೇವರು ತಮಗೆ ಒಳ್ಳೆಯದು ಮಾಡುತ್ತಾರೆ ಎಂಬುದು ಎಲ್ಲರ ನಂಬಿಕೆ . ಆದರೆ ಈ ಉದುಬತ್ತಿ ಹೊಗೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆಯಂತೆ, ಅನೇಕ ಖಾಯಿಲೆಗಳನ್ನು ಉಂಟುಮಾಡುತ್ತದೆಯಂತೆ.
*ಕೆಮಿಕಲ್ ಇರುವ ಅಗರಬತ್ತಿಗಳು ಹೊರಸೂಸುವ ಹೊಗೆಯಲ್ಲಿ ಶಿಸ, ಕಬ್ಬಿಣ, ಮೆಗ್ನೀಷಿಯಂ ಅಂಶಗಳಿದ್ದು ಇವುಗಳು ಶರೀರದಲ್ಲಿ ವಿಷದಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಇದರಿಂದ ವಿಷಕಾರಿ ಅಂಶವನ್ನು ಹೊರಹಾಕಲ್ಲು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಬಿಳ್ಳುತ್ತೆ ಇದರಿಂದ ಕಿಡ್ನಿ ಬೇಗನೆ ಹಾಳಾಗುವ ಸಂಭವವಿರುತ್ತದೆ.
* ಅಧ್ಯಾಯದ ಪ್ರಕಾರ ಉದುಬತ್ತಿ ಹೊಗೆಯಿಂದ ಚರ್ಮ ಹಾಗೂ ಕಣ್ಣೀನ ಅಲರ್ಜಿ ಉಂಟಾಗುತ್ತದೆಯಂತೆ.
* ಕೆಮಿಕಲ್ ಉಳ್ಳ ವಿಷ ಅಗರಬತ್ತಿಗಳು ನರಕ್ಕೆ ಸಂಬಂಧಿಸಿದ ರೋಗವನ್ನು ಹುಟ್ಟುಹಾಕುತ್ತೆ ಇದರಿಂದ ಮೆದುಳಿನ ಮೇಲೆ ಪರಿಣಾಮವಾಗಿ ಏಕಾಗ್ರತೆ ಹಾಗು ಮರುವಿನ ಸಮಸ್ಯೆಗಳು ಕಂಡು ಬರುತ್ತೆ.
* ಕೆಮಿಕಲ್ ಅಗರಬತ್ತಿಗಳು ಶ್ವಾಸಕೋಶದ, ಹಾಗು ಉಬ್ಬಸಗಳ ರೋಗವನ್ನು ತರುತ್ತಿವೆಯಂತೆ
ಆದ್ದರಿಂದ ಆದಷ್ಟು ಅಗರಬತ್ತಿಯ ಬಳಕೆಯ ಪ್ರಮಾಣವನ್ನು ಕಡಿಮೆಮಾಡಿ. ಸುವಾಸನೆಗೆ ಮಾರುಹೋಗಿ ಹೆಚ್ಚು ಹಣ ಕೊಟ್ಟು ಕೆಮಿಕಲ್ ಯುಕ್ತ ಉದುಬತ್ತಿ ಖರೀದಿಸುವ ಬದಲು ಕೆಮಿಕಲ್ ಇಲ್ಲದ ಅಗರಬತ್ತಿಯನ್ನು ಉಪಯೋಗ ಮಾಡುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.