ಕೂದಲು ಬಿಳಿಯಾಗುವುದನ್ನು ತಡೆಗಟ್ಟಬೇಕೆ...?

ಗುರುವಾರ, 31 ಅಕ್ಟೋಬರ್ 2019 (08:45 IST)
ಬೆಂಗಳೂರು : ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ಇದು ಕೂದಲ ಆರೋಗ್ಯವನ್ನು ಕಾಪಾಡುತ್ತದೆ. ಈ ಬೆಟ್ಟದ ನೆಲ್ಲಿಕಾಯಿಯಿಂದ ಲೇಹ ತಯಾರಿಸಿ ಪ್ರತಿದಿನ ಸೇವಿಸಿದರೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು ಹಾಗೂ ಕೂದಲುದುರುವುದು ಕಡಿಮೆಯಾಗುತ್ತದೆ.



ಬೆಟ್ಟದ ನೆಲ್ಲಿಕಾಯಿ ಲೇಹ ಮಾಡಲು ಬೇಕಾಗುವ ಸಾಮಾಗ್ರಿಗಳು:

 

ಬೆಟ್ಟದ ನೆಲ್ಲಿಕಾಯಿ 20, ಬೆಲ್ಲ 5 ಕಪ್, ನೀರು 2 ಕಪ್

 

ಮಾಡುವ ವಿಧಾನ:

ಮೊದಲಿಗೆ ಒಂದು ಬಾಣಲೆಯಲ್ಲಿ ತುರಿದ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಬೇಕು. ನಂತರ ಅದಕ್ಕೆ 1 ½  ಕಪ್ ನಷ್ಟು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಇನ್ನೊಂದು ಬಾಣಲೆಯಲ್ಲಿ ಬೆಲ್ಲ ಮತ್ತು ½ ಕಪ್ ನೀರು ಹಾಕಿ ಬೆಲ್ಲ ಕರಗುವವರೆಗೂ ಬಿಸಿ ಮಾಡಬೇಕು. ಬಳಿಕ ಅದನ್ನು ಬೇಯುತ್ತಿರುವ ಬೆಟ್ಟದ ನೆಲ್ಲಿಕಾಯಿ ಮಿಶ್ರಣಕ್ಕೆ ಸೇರಿಸಬೇಕು. ನಂತರ ಅದು ಪಾಕ ಬರುವವರೆಗೂ ಚೆನ್ನಾಗಿ ಬೇಯಿಸಬೇಕು. ಆಗ ಬೆಟ್ಟದ ನೆಲ್ಲಿಕಾಯಿ ಲೇಹ ರೆಡಿಯಾಗುತ್ತದೆ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಟೇಬಲ್ ಚಮದಷ್ಟು ಸೇವಿಸಬೇಕು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ