ಸಿಸೇರಿಯನ್ ಡೆಲಿವರಿಯಾಗಿದ್ದರೆ ಎರಡನೇ ಬಾರಿ ಗರ್ಭಧರಿಸಲು ಸಮಸ್ಯೆಯಾಗುತ್ತದೆಯೇ?
ಭಾನುವಾರ, 14 ಜುಲೈ 2019 (06:51 IST)
ಬೆಂಗಳೂರು : ನನಗೆ 33 ವರ್ಷ. ನನ್ನ ಪತಿಯ ವಯಸ್ಸು 35. ನಾನು ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಈಗ ನಮಗೆ ಒಂದೂವರೆ ವರ್ಷದ ಮಗುವಿದೆ. ನಾವು ಇನ್ನೊಂದು ಮಗು ಮಾಡಿಕೊಳ್ಳಲು ಪಯತ್ನಿಸುತ್ತಿದ್ದು ಆದರೆ ಇನ್ನು ಯಶಸ್ವಿಯಾಗಲಿಲ್ಲ. ನನ್ನ ಮೊದಲ ಹೆರಿಗೆ ಸಿಸೇರಿಯನ್ ಆಗಿದ್ದರಿಂದ ಎರಡನೇ ಬಾರಿ ಗರ್ಭ ಧರಿಸಲು ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವೇ?
ಸಿಸೇರಿಯನ್ ಡೆಲಿವರಿಯಾಗಿದ್ದರೆ ಇನ್ನೊಂದು ಬಾರಿ ಗರ್ಭಧರಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಸಿಸೇರಿಯನ್ ಡೆಲಿವರಿಯಾದವರು ಇನ್ನೊಂದು ಮಗುವನ್ನು ಪಡೆಯಲು ಸ್ವಲ್ಪ ವರ್ಷ ಕಾಯಬೇಕಾಗುತ್ತದೆ. ಇಲ್ಲವಾದರೆ ಹೊಟ್ಟೆ ಹಾಕಿದ ಸ್ಟೀಚ್ ಒಡೆಯುವ ಸಂಭವವಿರುತ್ತದೆ. ಹಾಗೇ ನಿಮಗೆ ಈ ಮೊದಲು ಗರ್ಭಕೋಶಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆಗಳಿಲ್ಲದಿದ್ದರೆ ಎರಡನೇ ಬಾರಿ ಗರ್ಭ ಧರಿಸಬಹುದು.