ನಾಯಿ ಇಷ್ಟಪಡುವ ಜನರು ಹೆಚ್ಚು ಸ್ನೇಹಿತರು.. ಆದ್ರೆ ಬೆಕ್ಕು ಇಷ್ಟಪಡುವರು?

ಬುಧವಾರ, 10 ಆಗಸ್ಟ್ 2016 (09:42 IST)
ಯಾರು ನಾಯಿಯನ್ನು ತುಂಬಾ ಇಷ್ಟಪಡುತ್ತಾರೋ ಅಂಥವರು ಅವರು ಆನ್‌ಲೈನ್‌ಯಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿರುತ್ತಾರೆ. ಆದ್ರೆ ಫೇಸ್‌ಬುಕ್‌ಯಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿರುತ್ತಾರಂತೆ ಎಂದು ಫೇಸ್‌ಬುಕ್ ಸ್ಟಡಿಯಿಂದ ಬಹಿರಂಗಗೊಂಡಿದೆ. ಡಾಗ್ ಪೀಪಲ್ ವರ್ಸಸ್ ಕ್ಯಾಟ್ ಪೀಪಲ್ ಅಂತ ವಿಂಗಡಿಸಿದೆ. 
ನಾಯಿಯನ್ನು ಇಷ್ಟಪಡುವ ಜನರು ಫೇಸ್‌ಬುಕ್‌ಲ್ಲಿ ಸುಮಾರು 26ಕ್ಕೂ ಅಧಿಕ ಸ್ನೇಹಿತರನ್ನು ಹೊಂದಿರುತ್ತಾರೆ. ಆದ್ರೆ ಬೆಕ್ಕನ್ನು ಹೊಂದಿರುವ ಜನರು ಯಾವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. 
 
ನಾಯಿ ಹೆಚ್ಚು ಸೋಷಿಯಲ್ ಆಗಿದ್ದು ಈಜಿಯಾಗಿದೆ. ಆದ್ರೆ ಬೆಕ್ಕು ಮೀಸಲಾಗಿಟ್ಟುರುವಂತಹ ಪ್ರಾಣಿ, ಅಲ್ದೇ ಹೆಚ್ಚು ಸ್ವಾತಂತ್ರ್ಯವಾಗಿರೋ, ಅನಿರೀಕ್ಷಿತ ವಾಗಿರುವಂತಹದ್ದು ಎಂದು ತಿಳಿದು ಬಂದಿದೆ. ಇವೆಲ್ಲಾ ಪ್ರಾಣಿಗಳ ಗುಣಗಳನ್ನು ಜನರ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲವು ಎಂದು ತಿಳಿಸಿದೆ. 
 
160,000 ಜನರ ಮೇಲೆ ಬೆಕ್ಕು ಹಾಗೂ ನಾಯಿಗಳನ್ನು ವರ್ಗಿಕರಣ ಮಾಡಿ ಫೊಟೋಗಳನ್ನು ಫೇಸ್‌ಬುಕ್‌ಗಳಲ್ಲಿ ಸ್ಯಾಂಪಲ್ ಮಾಡಲಾಗಿತ್ತು. ಈ ವೇಳೆ ತಿಳಿದು ಬಂದ ಅಂಶವೆನಂದರೆ..
 
ನಾಯಿ ಪ್ರಿಯರಿಗಿಂತ ಬೆಕ್ಕು ಪ್ರಿಯರು ಹೆಚ್ಚು ಸಿಂಗಲ್ ಆಗಿರಲು ಬಯಸುತ್ತಾರೆ. ಆದ್ರೆ ಇದು ಅವರವರ ಸ್ಟೇಟಸ್ ಮೇಲೆ ನಿರ್ಧರಿತವಾಗಿರುತ್ತದೆ ಎಂದು ಫೇಸ್‌ಬುಕ್ ಅಧ್ಯಯನಗಳಿಂದ ತಿಳಿದು ಬಂದಿದೆ. 
 
ಶೇ 20 ರಷ್ಟು ನಾಯಿ ಪ್ರಿಯರನ್ನು ಕಂಪೇರ್ ಮಾಡಿದಾಗ 30ಕ್ಕೂ ಅಧಿಕ ಜನರು ಬೆಕ್ಕು ಪ್ರಿಯರು ಸಿಂಗಲ್ ಆಗಿರುತ್ತಾರೆ. ಇನ್ನೂ ಫೇಸ್‌ಬುಕ್‌ಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಲು ನಾಯಿ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ