ಗಂಡ-ಹೆಂಡತಿಯರೇ ಹುಷಾರ್! ಜಗಳ ಮಾಡುವಾಗ ತಪ್ಪಿಯೂ ಈ ಮಾತು ಹೇಳದಿರಿ!
ಶನಿವಾರ, 16 ಡಿಸೆಂಬರ್ 2017 (08:34 IST)
ಬೆಂಗಳೂರು: ಗಂಡ-ಹೆಂಡತಿ ಎಂದ ಮೇಲೆ ಜಗಳವೂ ಸರ್ವೇ ಸಾಮಾನ್ಯ. ಆದರೆ ಎಷ್ಟೇ ಜಗಳ ಆಡಿದರೂ ಬಾಯ್ತಪ್ಪಿಯೂ ಕೆಲವು ಮಾತನ್ನು ಆಡಲೇ ಬಾರದು. ಆ ಮಾತುಗಳನ್ನು ಹೇಳಿದರೆ ಪತ್ತೆ ಪ್ಯಾಚ್ ಅಪ್ ಆಗೋದು ಕಷ್ಟ ಎಂಬುದು ನೆನಪಿರಲಿ.
‘ನಿನ್ನ ಸಹಿಸಕ್ಕಾಗ್ತಿಲ್ಲ’
ಜಗಳ ವಿಪರೀತಕ್ಕೆ ಹೋಗಿ ನಿನ್ನ ಕಾಟ ನಂಗೆ ಸಹಿಸಕ್ಕಾಗ್ತಿಲ್ಲ ಎನ್ನಬೇಡಿ. ಪರಸ್ಪರ ಎಷ್ಟೇ ಕೋಪವಿದ್ದರೂ ಈ ರೀತಿ ಅವಮಾನ ಮಾಡಿದರೆ ಸಂಗಾತಿಗೆ ಪಥ್ಯವಾಗಲಿಕ್ಕಿಲ್ಲ.
‘ನಾವು ಬೇರೆ ಆಗೋಣ’
ನಿನ್ನ ಜತೆ ನಂಗೆ ಇರಕ್ಕಾಗಲ್ಲ, ನಾವು ಬೇರೆ ಆಗೋದೇ ಒಳ್ಳೆಯದು ಎಂದರೆ ಕತೆ ಮುಗಿಯಿತು. ಕ್ಷಣಿಕ ಸಿಟ್ಟು ಜೀವನವನ್ನೇ ಹಾಳು ಮಾಡಿಬಿಡಬಹುದು. ಆ ಕ್ಷಣದ ಕೋಪಕ್ಕೆ ಜೀವನವನ್ನೇ ಬಲಿಕೊಡಬೇಡಿ.
‘ತಪ್ಪು ಮಾಡಿದ್ದು ನೀನೇ’
ತಪ್ಪು ಯಾರಿಂದಲೇ ಆಗಿರಬಹುದು. ಆದರೆ ನಿನ್ನದೇ ತಪ್ಪು ಎಂದು ಬೆರಳು ತೋರಿಸಿ ಮಾತನಾಡಿದರೆ ಕೋಪದ ಭರದಲ್ಲಿ ಇನ್ನೊಬ್ಬರು ಅದನ್ನು ಒಪ್ಪಿಕೊಳ್ಳಲು ತಯಾರಿರಲ್ಲ. ಆಗ ಮನದೊಳಗಿನ ಕಿಚ್ಚು ಮತ್ತಷ್ಟು ಹೆಚ್ಚುತ್ತದೆ.
‘ಸಣ್ಣ ವಿಷಯವನ್ನು ಯಾಕೆ ದೊಡ್ಡದು ಮಾಡ್ತೀಯಾ?’
ಎಷ್ಟೇ ಸಣ್ಣ ವಿಚಾರಕ್ಕೆ ಜಗಳ ಆರಂಭವಾಗಿರಬಹುದು. ಆದರೆ ಸಣ್ಣ ವಿಷಯವನ್ನೇ ದೊಡ್ಡದು ಮಾಡ್ತಿದ್ದೀಯಾ ಎಂದು ಪಾಯಿಂಟ್ ಔಟ್ ಮಾಡಿದರೆ ನಿನ್ನಿಂದಾಗಿಯೇ ಜಗಳ ಶುರುವಾಯಿತು ಎನ್ನುವ ಹಾಗೆ ಆಗುತ್ತದೆ. ಕಾರಣ ಎಷ್ಟೇ ಸಣ್ಣದಿರಲಿ, ಅದು ಇಷ್ಟು ದೊಡ್ಡ ಜಗಳಕ್ಕೆ ಕಾರಣವಾಗಿಲ್ಲವೇ ಎಂಬುದನ್ನು ಯೋಚಿಸಿ.
‘ನಿನ್ನ ಹಳೆಯ ಪ್ರೇಮಿಯ ಬಳಿ ಹೋಗು’
ಹೀಗೆ ಹೇಳಿದರೆ ಮುಗಿದೇ ಹೋಯ್ತು. ನಾನಾ ರೀತಿಯಲ್ಲಿ ತಪ್ಪು ಕಲ್ಪನೆ ಮೂಡಿಸುತ್ತದೆ. ತನ್ನನ್ನು ಇನ್ನೊಬ್ಬರೊಂದಿಗೆ ಸಂಬಂಧ ಕಲ್ಪಿಸುತ್ತಿದ್ದಾರೆ ಎನಿಸಬಹುದು ಇಲ್ಲವೇ ನಂಬಿಕೆಯ ಪ್ರಶ್ನೆ ಎದುರಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ