ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನನ್ನು ಹತ್ಯೆ ಮಾಡಿಸಿದ ಮಗಳು!

ಬುಧವಾರ, 13 ಡಿಸೆಂಬರ್ 2017 (12:19 IST)
ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತಾಯಿಯ ಪ್ರಿಯತಮನನ್ನು ಪದವಿ ವಿದ್ಯಾರ್ಥಿನಿ ಕೊಲೆ ಮಾಡಿಸಿರುವ ಘಟನೆ ಹೈದರಾಬಾದನಲ್ಲಿ ಜರುಗಿದೆ.
 
ರಿಯಲ್ ಎಸ್ಟೇಟ್ ಉದ್ಯಮಿ ದುರ್ಗಾ ದಾಸ್ (48) ಕೊಲೆಯಾಗಿದ ವ್ಯಕ್ತಿಯಾಗಿದ್ದು, ಅನೈತಿಕ ಸಂಬಂಧದಿಂದ ಪದೇ ಪದೇ ಮನೆಗೆ ಹೋಗುತ್ತಿದ್ದ. ಇದರಿಂದ ಬೇಸತ್ತ ಪದವಿ ವಿದ್ಯಾರ್ಥಿನಿ ಸ್ನೇಹಿತರ ಸಹಾಯದಿಂದ ಕೊಲ್ಲಿಸಿದ್ದಾಳೆ.
 
ಡಿಸೆಂಬರ್ 7ರಂದು ಕೊಲೆ ಯತ್ನ ನಡೆದು, ಗಾಯಗೊಂಡಿದ್ದ ದಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇವರು ಸಾವನ್ನಪ್ಪಿದ್ದರು.
 
ದಾಸ್ ಪತ್ನಿ ಅರುಣಾವತಿ ದೂರಿನ ಆಧಾರ ಮೇಲೆ ರಾಮಚಂದ್ರಪುರಂ ಪೊಲೀಸರು ಕೊಲೆಗೆ ಯತ್ನ ನಡೆಸಿದ ಆರೋಪಿಗಳು ಇನ್ನೋವಾದಲ್ಲಿ ಆಗಮಿಸಿದ್ದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಆರೋಪಿಗಳ ಹೇಳಿಕೆ ಮೇರೆಗೆ ದಾಸ್ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಮಹಿಳೆಯ ಮಗಳು ಶ್ರೀಜಾಳನ್ನು ಬಂಧಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ