ಕರಿಬೇವಿನ ಎಲೆ ತಿನ್ನದೇ ಪಕ್ಕಕ್ಕಿಡಬೇಡಿ! ಅದರಲ್ಲಿದೆ ಉಪಯೋಗಗಳು
ಸೋಮವಾರ, 2 ಜನವರಿ 2017 (12:39 IST)
ಬೆಂಗಳೂರು: ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ.
ಮುಖ್ಯವಾಗಿ ಇದರಲ್ಲಿ ಕಬ್ಭಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ. ಇದು ಗರ್ಭಿಣಿಯರಿಗೆ, ಹೆಣ್ಣುಮಕ್ಕಳಿಗೆ ಒಳ್ಳೆಯದು. ಸಾಮಾನ್ಯವಾಗಿ ರಕ್ತದ ಕೊರತೆ ಅನಿಮೀಯಾದಿಂದ ಬಳಲುತ್ತಿರುವವರು, ಕರಿಬೇವಿನ ಎಲೆಯನ್ನು ತಿಂದಷ್ಟೂ ಒಳ್ಳೆಯದು.
ಮದ್ಯ ಸೇವಿಸುವವರು ಲಿವರ್, ಕಿಡ್ನಿ ಸಮಸ್ಯೆಗೆ ತುತ್ತಾಗುವುದು ಸಹಜ. ಹೀಗಾಗಿ ಮದ್ಯಪಾನಿಗಳು ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಈ ತೊಂದರೆ ನಿವಾರಿಸಿಕೊಳ್ಳಬಹುದು ಎಂದು ಕೆಲವು ಸಂಶೋಧನೆಗಳೇ ಹೇಳಿವೆ.
ಮಧುಮೇಹಿಗಳಿಗಂತೂ ಇದು ರಾಮಬಾಣ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಕರಿಬೇವಿನ ಎಲೆಗಳು ಸಹಕಾರಿ.ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ನೀವು ನಂಬಲೇ ಬೇಕು. ಮೂಗು ಕಟ್ಟುವುದು, ಶ್ವಾಸಕೋಶ ಸಮಸ್ಯೆಗಳಿಗೂ ಕರಿಬೇವಿನ ಎಲೆಗಳ ಉಪಯೋಗ ಉತ್ತಮ. ಅಲ್ಲದೆ ಚರ್ಮದ ಸಂರಕ್ಷಣೆ, ಕೂದಲು ಸೊಂಪಾಗಿ ಬೆಳೆಯಲೂ ಕರಿಬೇವಿನ ಎಲೆ ತಿನ್ನಿ. ಪಕ್ಕಕ್ಕಿಡಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ