ಬ್ರೇಕ್ ಫಾಸ್ಟ್ ಗೆ ಕತ್ತರಿ ಹಾಕುತ್ತಿದ್ದೀರಾ? ಹಾಗಿದ್ದರೆ ಪರಿಣಾಮ ನೆಟ್ಟಗಿರಲ್ಲ!

ಬುಧವಾರ, 6 ಡಿಸೆಂಬರ್ 2017 (07:13 IST)
ಬೆಂಗಳೂರು: ಬೆಳಗೆ ತಡವಾಗಿ ಏಳುವುದರಿಂದಲೋ, ಇನ್ಯಾವುದೋ ಕಾರಣಕ್ಕೋ ಬೆಳಗಿನ ಉಪಾಹಾರ ತಿನ್ನದೇ ಇರುವ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಜೋಕೆ!
 

ಇಸ್ರೇಲ್ ನ ವಿವಿಯ ಅಧ್ಯಯನಕಾರರ ಪ್ರಕಾರ ಬೆಳಗಿನ ಉಪಾಹಾರ ತ್ಯಜಿಸುವುದರಿಂದ ದೇಹ ತೂಕ ಹೆಚ್ಚುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತೀವ್ರತರದ ಮಧುಮೇಹ ಬರುವ ಅಪಾಯವೂ ಹೆಚ್ಚಿದೆಯಂತೆ.

ಬೆಳಗಿನ ಉಪಾಹಾರ ತ್ಯಜಿಸಿ, ದಿನದ ಉಳಿದ ಹೊತ್ತಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನುವ ಅಭ್ಯಾಸವಿಟ್ಟುಕೊಂಡಿದ್ದರೆ ಇಂದೇ ಬಿಡುವುದು ಒಳ್ಳೆಯದು. ಇದು ತೂಕ ಹೆಚ್ಚುವಿಕೆ ಮತ್ತು ಮಧುಮೇಹಕ್ಕೆ ದಾರಿ ಮಾಡಿದಂತೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹಾಗಾಗಿ ಹುಷಾರಾಗಿರಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ