ಮಾತ್ರೆ ಸೇವನೆ ಕಡೆ ಗಮನವಿರಲಿ. ಜ್ಯೂಸ್ ಜತೆಗೆ ಮಾತ್ರೆ ಸೇವಿಸಬಾರದು

ಶನಿವಾರ, 23 ಜುಲೈ 2016 (09:38 IST)
ಮಾತ್ರೆ ಸೇವನೆ ಅಂದರೆ ಸುಲಭದ ಮಾತಲ್ಲ... ಮಾತ್ರೆಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದು ಗೊತ್ತಿರಬೇಕಾಗುತ್ತದೆ. ಎಲ್ಲಾ ರೋಗಿಗಳು ಮಾತ್ರೆ ಸೇವನೆ ಕಡೆಗೆ ಗಮನಕೊಡಬೇಕು. ಅದರಲ್ಲೂ ದೀರ್ಘಕಾಲದ ರಕ್ತದೋತ್ತಡ ಎದುರಿಸುತ್ತಿರುವರು ಹಾಗೂ ಹೃದಯ ಕಾಯಿಲೆ ಇರುವವರು ಜ್ಯೂಸ್ ಜತೆಗೆ ಮಾತ್ರೆ ಸೇವಿಸುವುದು ಉತ್ತಮವಲ್ಲ.


ರಕ್ತದೋತ್ತಡ ಎದುರಿಸುತ್ತಿರುವರು ಹಾಗೂ ಹೃದಯ ಕಾಯಿಲೆ ಇರುವವರು ಜ್ಯೂಸ್ ಜತೆಗೆ ಮಾತ್ರೆ ಸೇವಿಸುವುದು ಉತ್ತಮವಲ್ಲ. 

ಅದಕ್ಕೆ ಬದಲಾಗಿ ಮಾತ್ರೆ ಸೇವಿಸಲು ನೀರನ್ನೇ ಬಳಸಿ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಐಎಂಎ ಹೇಳಿದೆ. ಇದು ಎಲ್ಲಾ ರೋಗಿಗಳಿಗೂ ಅನ್ವಯಿಸುವಂತಹದ್ದು ಆಗಿರುತ್ತದೆ ಎಂದು ಎಚ್ಚರ ನೀಡಿದೆ. 
 
ಜ್ಯೂಸ್‌ಗಳನ್ನು ಬಳಸುವುದರಿಂದ ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇನ್ನೂ ಕಿತ್ತಳೆ ಹಾಗೂ ಸೇಬು ಜ್ಯೂಸ್‌ಗಳನ್ನು ಮಾತ್ರೆಗಳಲ್ಲಿನ ಹಿರುವಿಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದರಿಂದಾಗಿ ಮಾತ್ರೆ ದೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೆ ದ್ರಾಕ್ಷಿ ಹಣ್ಣಿನ ಜ್ಯೂಸ್ ಕೆಲವು ಔಷಧಿಗಳಲ್ಲಿನ ಹಿರುವಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ಐಎಂಎ ಕಾರ್ಯದರ್ಶಿ ಡಾ.ಕೆ.ಕೆ ಅಗರ್ವಾಲ್ ತಿಳಿಸಿದ್ದಾರೆ. ಕೆನಡಾದ ಒಂಟಾರಿಯೇ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ. 
 
ಹಣ್ಣಿನ ರಸದ ಜತೆಗೆ ಮಾತ್ರೆ ಸೇವಿಸಿದಾಗ ರೋಗಕ್ಕೆ ಕಾರಣವಾದ ಸೋಂಕುಗಳನ್ನು ತಡೆಹಿಡಿಯುವ ಶಕ್ತಿಯನ್ನೇ ಮಾತ್ರೆ ಕಳೆದುಕೊಳ್ಳುತ್ತದೆ. ಜ್ಯೂಸ್‌ಗಳು ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿಗೆ ವಿರುದ್ಧವಾಗಿ ಕೆಲಸ ನಿರ್ವಹಿಸುತ್ತವೆ, ಆದ್ದರಿಂದ ನೀರಿನಲ್ಲಿಯೇ ಮಾತ್ರೆಗಳನ್ನು ಸೇವಿಸುವುದು ಉತ್ತಮ..
 
ಆದರೆ ಅಮೇರಿಕಾ ಆಹಾರ ಹಾಗೂ ಔಷಧಿ ಮಂಡಳಿ ದ್ರಾಕ್ಷಿ ಜ್ಯೂಸ್‌ನೊಂದಿಗೆ ಯಾವುದೇ ಔಷಧಿ ಸೇವನೆ ಉತ್ತಮವಲ್ಲ ಎಂದು ತಿಳಿಸಿದೆ.
 
ಭಾರತದಲ್ಲಿ ಹಣ್ಣಿನ ರಸದ ಜತೆಗೆ ಮಾತ್ರೆ ಸೇವನೆ ಬಗ್ಗೆ ಅಷ್ಟೊಂದು ಸಂಶೋಧನೆ ನಡೆದಿಲ್ಲ. ಆದ್ರೆ ಸಾಮಾನ್ಯವಾಗಿ ನೀರಿನ ಜತೆಗೆ ಮಾತ್ರ ಸೇವನೆ ಮಾಡಬೇಡಿ ಎಂದು ವೈದ್ಯರು ರೋಗಿಗಳಿಗೆ ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ