ಮೂತ್ರದ ಸೋಂಕಿಗೆ ಕ್ರಾನ್‌ಬೆರ್ರಿ ಜ್ಯೂಸ್‌ ಕುಡಿಯಿರಿ

ಬುಧವಾರ, 22 ಜೂನ್ 2016 (10:09 IST)
ಸಮ್ಮರ್‌ಗೆ ಹಲವು ಸೋಂಕುಗಳು ತಗುಲುತ್ತವೆ. ಮೂತ್ರದ  ಸೋಂಕಿಗೆ ಹಾಗೂ ಡಯಟ್ ಮಾಡಲು ಕ್ರಾನ್‌ಬೆರ್ರಿ ಜ್ಯೂಸ್ ಕುಡಿದ್ರೆ ಸೋಂಕನ್ನು ನಿವಾರಿಸಬಹುದು. ಯಾವ ಕಾಲದಲ್ಲಾದರೂ ಸರಿ ನೀವೂ ಕ್ರಾನ್‌ಬೆರ್ರಿ ಜ್ಯೂಸ್ ಕುಡಿಯಿರಿ. ಕ್ರಾನ್‌ಬೆರ್ರಿ ಜ್ಯೂಸ್ ಅಂದ್ರೆ ಕಡುಕೆಂಪು ಹಣ್ಣಿನ ಜ್ಯೂಸ್. ಈ ಜ್ಯೂಸ್‌ಗೆ ಪುದೀನ ಫ್ಲೇವರ್ ಸೇರಿಸಿದ್ರೆ ಅದರ ಟೇಸ್ಟ್ ಬೇರೆ. 
ನಿತ್ಯವೂ 240 ಮೀ.ಲೀ ಗ್ಲಾಸ್ ಕ್ರಾನ್‌ಬೆರ್ರಿ ಜ್ಯೂಸ್ ಕುಡಿದ್ರೆ ಮಹಿಳೆಯರಿಗೆ ಆಗುವ ಮೂತ್ರದ  ಸೋಂಕನ್ನು ನಿವಾರಿಸಬಹುದಾಗಿದೆ. ಇದನ್ನು ನಾವು ಹೇಳ್ತಿಲ್ಲ ಸಂಶೋಧನೆ ಹೇಳಿದೆ. ಭಾರತೀಯ ಮೂಲದ ಸಂಶೋಧಕರೊಬ್ಬರು ನಡೆಸಿದ ಅಧ್ಯಯನದ ಪ್ರಕಾರ ಕ್ರಾನ್‌ಬೆರ್ರಿ ಜ್ಯೂಸ್ ಸೇವಿಸಿದ್ರೆ ಮೂತ್ರದ  ಸಮಸ್ಯೆಗಳನ್ನು ನಿವಾರಿಸಬಲ್ಲದು ಎಂದು ತಿಳಿಸಿದ್ದಾರೆ.
 
ಮೂತ್ರದ ಸೋಂಕು ಅಥವಾ ಮೂತ್ರದ ಯಾವುದೇ ಭಾಗದ ಸೋಂಕು ಹಾಗೂ ಕಿಡ್ನಿ ಸಂಬಂಧಿತ ಸೋಂಕಿಗೆ 8 ಗ್ಲಾಸ್ ಕ್ರಾನ್‌ಬೆರ್ರಿ ರಸ ಸೇವಿಸಿ, ಇನ್ನೂ ಕ್ರಾನ್‌ಬೆರ್ರಿ ರಸ ನಿತ್ಯವೂ ಸೇವಿಸಿದರೆ ಆರೋಗ್ಯಕ್ಕೆ ಸಹಾಯಕವಾಗಬಲ್ಲದು ಎಂದು ಅಧ್ಯಯನ ಸಂಸ್ಥೆಯೊಂದು ತಿಳಿಸಿದೆ.
 
ಮಹಿಳೆಯರಲ್ಲಿ 40ರ ನಂತರ ಹಲವು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಯಾವುದೇ ಅಡ್ಡಪರಿಣಾಮಗಲಿಲ್ಲದೇ ಕ್ರಾನ್‌ಬೆರ್ರಿ ಜ್ಯೂಸ್ ಕುಡಿದ್ರೆ ಉತ್ತಮವಾದದ್ದು, ದೀರ್ಘಕಾಲ ಜೀವಕೋಶಗಳನ್ನು ಕಾಪಾಡುತ್ತದೆ ಅಂತಾರೆ ಅಮೇರಿಕಾದ ಬೋಸ್ಟನ್ ವಿಶ್ವವಿದ್ಯಾಲಯದ ಪ್ರೋಫೆಸರ್ ಕಲ್ಪನಾ ಗುಪ್ತಾ.
 
ಇನ್ನೂ ಇಂದಿನ ದಿನಗಳಲ್ಲಿ ಬ್ಯಾಕ್ಟೇರಿಯಲ್ ಇನ್‌ಫೇಕ್ಷನ್ ಹೆಚ್ಚಾಗುತ್ತಿದೆ. ಜಗತ್ತಿನಾದಂತ್ಯ ಈ ಸಮಸ್ಯೆ ಎದ್ದು ಕಾಣುತ್ತಿದೆ. ಅಲ್ಲದೇ 150 ಮಿಲಿಯನ್ ಜನರು, ಅದರಲ್ಲಿ ಶೇ.60ರಷ್ಟು ಮಹಿಳೆಯರಲ್ಲಿ ಮೂಂತ್ರದ ಸೋಂಕು ಕಾಣಿಸಿಕೊಳ್ಳುತ್ತಿದೆಯಂತೆ.
 
ಸಾಮಾನ್ಯವಾಗಿ ಮೂತ್ರದ ಸೋಂಕುನ್ನು ತಡೆಗಟ್ಟಲು ಪ್ರಾಥಮಿಕ ಚಿಕಿತ್ಸೆ ಕೈಗೊಳ್ಳಬಹುದಾದರೂ, ದೀರ್ಘಕಾಲದವರೆಗೆ ಕಾಡುವ ಈ ಸಮಸ್ಯೆ ಬಾರದಂತೆ ತಡೆಗಟ್ಟಲು ಈ ಜ್ಯೂಸ್ ಉಪಯೋಗಕಾರಿಯಾಗಬಲ್ಲದು. ಸೋಂಕನ್ನು ನಿವಾರಿಸುವ ಹಲವು ಅಂಶಗಳು ಕ್ರಾನ್‌ಬೆರ್ರಿ ಜ್ಯೂಸ್‌ನಲ್ಲಿವೆ. ಮುಖ್ಯವಾಗಿ ಕ್ರಾನ್‌ಬೆರ್ರಿ ಜ್ಯೂಸ್ 1 ಗ್ಲಾಸ್ ಸೇವಿಸಿದರೆ ಮೂತ್ರದ ಸೋಂಕಿನ್ನು ತಡೆಗಟ್ಟಬಹುದು. ಆದ್ದರಿಂದ ಹೆಚ್ಚಿನ ಜನರು ಕ್ರಾನ್‌ಬೆರ್ರಿ ಜ್ಯೂಸ್‌ಗೆ ಮೋರೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ