ಒಣಕೆಮ್ಮು ಇದ್ದರೆ ರಾತ್ರಿಯ ವೇಳೆ ಇದನ್ನು ಸೇವಿಸಿ

ಮಂಗಳವಾರ, 30 ಜುಲೈ 2019 (08:53 IST)
ಬೆಂಗಳೂರು : ವಾತಾವರಣದಲ್ಲಿ ಬದಲಾವಣೆ, ಹೊಗೆ, ಧೂಳಿನಿಂದ ಒಣ ಕೆಮ್ಮು ಬರುತ್ತದೆ. ಈ ಒಣಕೆಮ್ಮುವನ್ನು ಪ್ರಾರಂಭದಲ್ಲೇ ಸರಿಪಡಿಸಿಕೊಳ್ಳದಿದ್ದರೆ ಇದರಿಂದ ಶ್ವಾಸಕೋಶದ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ಆದ್ದರಿಂದ ಈ ಒಣಕೆಮ್ಮುವನ್ನು ನಿವಾರಿಸಲು ರಾತ್ರಿಯ ವೇಳೆ ಇದನ್ನು ಸೇವಿಸಿ.




ಒಣಕೆಮ್ಮುವಿಗೆ ಅರಶಿನ ಪರಿಣಾಮಕಾರಿ ಮನೆಮದ್ದು. ಅರಶಿನದಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಬ್ಯಾಕ್ಟೀರಿಯಾಗಳ ವಿರುದ್ಧ, ವೈರಲ್ ವಿರುದ್ಧ ಹೋರಾಡುತ್ತದೆ. ಹಾಗೂ ಉರಿಯೂತ ಶಮಬಕಾರಿ ಗುಣಗಳನ್ನು ಹೊಂದಿರುತ್ತದೆ.


ರಾತ್ರಿಯ ವೇಳೆ ಊಟವಾದ ನಂತರ ಒಂದು ಗ್ಲಾಸ್ ಬಿಸಿ ಹಾಲಿಗೆ 2 ಚಿಟಿಕೆ ಅರಶಿನ ಹಾಗೂ ಜೇನುತುಪ್ಪವನ್ನು  ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು. ಇದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ