ಮುಖದ ಕಾಂತಿ ಹೆಚ್ಚಲು ಬಳಸಿ ಹಾಲಿನ ಪುಡಿಯ ಫೇಸ್ ಪ್ಯಾಕ್

ಮಂಗಳವಾರ, 30 ಜುಲೈ 2019 (08:49 IST)
ಬೆಂಗಳೂರು : ಮೂಖದ ಕಾಂತಿ ಹೆಚ್ಚಿಸಲು ಹಾಲು ತುಂಬಾ ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಹಾಲಿನ ಪುಡಿಯು ಹಾಲಿಗಿಂತ ಹೆಚ್ಚಿನ ಮಟ್ಟದಲ್ಲಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.




ಯಾಕೆಂದರೆ ಹಾಲಿನ ಪುಡಿಯಲ್ಲಿ ನೀರಿನಾಂಶವನ್ನು ಸಂಪೂರ್ಣವಾಗಿ ತೆಗೆದುಹಾಕಿ ಘನ ಹಾಲು ಮಾತ್ರ ಉಳಿದಿರುವುದು. ಇದರಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ. ನೈಸರ್ಗಿಕವಾಗಿ ತ್ವಚೆ ಆರೈಕೆ ಮಾಡಲು ಬೇಕಾಗುವಂತಹ ವಿಟಮಿನ್‌ ಗಳು, ಪೋಷಕಾಂಶಗಳು ಮತ್ತು ಖನಿಜಾಂಶಗಳು ಇದರಲ್ಲಿ ಹೆಚ್ಚಿನ ಮಟ್ಟದಲ್ಲಿದೆ. ಆದ್ದರಿಂದ ಹಾಲಿನ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿಕೊಂಡರೆ ಮುಖದ ಕಾಂತಿ ಮತ್ತಷ್ಟು ಹೆಚ್ಚಾಗುತ್ತದೆ.


1 ಚಮಚ ಹಾಲಿನ ಪುಡಿ, 2 ಚಮಚ ಕಿತ್ತಳೆ ಜ್ಯೂಸ್ ಮತ್ತು 1 ಚಮಚ ಕಡಲೆಹಿಟ್ಟನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಕೈಬೆರಳಿ ನಿಂದ ಅಥವಾ ಸಣ್ಣ ಬ್ರಶ್‌ನಿಂದ ಈ ಪೇಸ್ಟ್ ನ್ನು ತೊಳೆದ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಒಂದು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ಇದನ್ನು ಬಳಸಿ. ಇದರಿಂದ ಉತ್ತಮ ಫಲಿತಾಂಶ ಕಾಣಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ