ಕಾಫಿಯಲ್ಲಿ ಆಯಸ್ಸು ಹೆಚ್ಚಿಸುವ ಗುಣವೂ ಇದೆಯಂತೆ!

ಮಂಗಳವಾರ, 17 ಜನವರಿ 2017 (11:42 IST)
ಬೆಂಗಳೂರು: ಕಾಫಿ ಕುಡಿಯೋದು ಒಳ್ಳೇದಲ್ಲ ಎಂದು ಇಲ್ಲಿವರೆಗೆ ನಾವೆಲ್ಲಾ ನಂಬಿಕೊಂಡಿದ್ದೇವೆ. ಆದರೆ ಹೊಸದಾಗಿ ಬಂದ ಸಂಶೋಧನೆಯೊಂದು ಕಾಫಿ ಕುಡಿಯುವುದರಿಂದ ಆಯಸ್ಸು ಹೆಚ್ಚಿಸುತ್ತದೆ ಎಂದು ಹೇಳಿದೆ.


ಅಮೆರಿಕಾದ ಸಂಶೋಧಕರು ಕಂಡುಕೊಂಡು ಸತ್ಯದ ಪ್ರಕಾರ, ಕಾಫಿಯಲ್ಲಿರುವ ಕೆಫೈನ್ ಅಂಶ ರಕ್ತದಲ್ಲಿರುವ ರಾಸಾಯನಿಕಗಳು ಹೆಚ್ಚಾಗದಂತೆ ತಡೆಹಿಡಿಯುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಉದ್ದೀಪನಗೊಂಡ ರಕ್ತ ನಾಳಗಳು ಗಡುಸಾಗುವ ಸಾಧ್ಯತೆ ಹೆಚ್ಚು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಸಂಶೋಧಕರ ಅಭಿಪ್ರಾಯ. ಅಲ್ಲದೆ ಉದ್ದೀಪನಗೊಳಿಸುವ ಗುಣದಿಂದ ಹಲವು ರೋಗಗಳಿಗೆ ಕಾರಣವಾಗುತ್ತವೆ ಎಂದಿದ್ದಾರೆ.

ಯುವ ಜನತೆ ಮತ್ತು  ವಯಸ್ಸಾದವರ ಎರಡು ಗುಂಪು ಮಾಡಿಕೊಂಡು ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಹಾಗಿದ್ದರೆ ಇನ್ನೇಕೆ ತಡ ಕಾಫಿ, ಟೀ ಚೆನ್ನಾಗಿ ಕುಡಿಯಲು ಹಿಂಜರಿಕೆ ಬೇಡ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ