ಬೆಂಗಳೂರು : ಡ್ರೈ ಫ್ರೋಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಆದಕಾರಣ ಎಲ್ಲಾ ತರಹದ ಡ್ರೈಫ್ರೂಟ್ಸ್ ನಿಂದ ಆರೋಗ್ಯಕರವಾದ ಬರ್ಫಿ ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ತುಪ್ಪ, 1 ಕಪ್ ಬಾದಾಮಿ, 1 ಕಪ್ ಗೊಂದ್, ¼ ಕಪ್ ಗೋಡಂಬಿ, 2 ಚಮಚ ಪಿಸ್ತಾ, ¼ ಕಪ್ ಅಂಜೂರದ ಹಣ್ಣು, 2 ಚಮಚ ಒಣದ್ರಾಕ್ಷಿ, 2 ಚಮಚ ಕುಂಬಳಕಾಯಿ ಬೀಜ, 1 ಕಪ್ ಒಣ ತೆಂಗಿನಕಾಯಿ, 2 ಚಮಚ ಗಸೆಗಸೆ, 5 ಒಣ ಖರ್ಜೂರ, 1 ಕಪ್ ಬೆಲ್ಲ, ¼ ಕಪ್ ನೀರು, ¼ ಚಮಚ ಜಾಯಿಕಾಯಿ ಪುಡಿ, ½ ಚಮಚ ಏಲಕ್ಕಿ ಪುಡಿ.
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಗೊಂದ್ ,ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರದ ಹಣ್ಣು, ಒಣದ್ರಾಕ್ಷಿ, ಕುಂಬಳಕಾಯಿ ಬೀಜ, ತೆಂಗಿನ ಕಾಯಿ ತುರಿ, ಗಸೆಗಸೆ, ಒಣ ಖರ್ಜೂರ ಎಲ್ಲಾವನ್ನು ಹುರಿದುಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ನೀರು ಹಾಕಿ ಬೆಲ್ಲವನ್ನು ಕರಗಿಸಿ ಬೆಲ್ಲದ ಪಾಕ ತಯಾರಿಸಿ. ಇದಕ್ಕೆ ಎಲ್ಲಾ ಡ್ರೈಫ್ರೂಟ್ಸ್ ಗಳನ್ನು ಸೇರಿಸಿ. ಮತ್ತೆ ಅದಕ್ಕೆ ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ ಮಿಶ್ರಣ ಮಾಡಿ ತುಪ್ಪ ಸವರಿದ ಒಂದು ಪಾತ್ರೆಗೆ ಸುರಿಯಿರಿ. 30 ನಿಮಿಷ ಬಿಟ್ಟು ಅದನ್ನು ಕತ್ತರಿಸಿದರೆ ಡ್ರೈಫ್ರೂಟ್ಸ್ ಬರ್ಫಿ ರೆಡಿ.