ಗರಿಕೆ ಹುಲ್ಲಿನ ಗರಿಷ್ಠ ಉಪಯೋಗಗಳು

ಬುಧವಾರ, 11 ಜನವರಿ 2017 (09:22 IST)
ಬೆಂಗಳೂರು: ಗರಿಕೆ ಹುಲ್ಲು ಗಣಪತಿ ಹವನಕ್ಕೆ ಮಾತ್ರ ಉಪಯೋಗವಾಗುವುದಲ್ಲ. ಇದರಿಂದ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಏನೇನು ಉಪಯೋಗಗಳು ಎಂದು ತಿಳಿದುಕೊಳ್ಳೋಣ.


ಗರಿಕೆ ಹುಲ್ಲು ಗಣಪತಿ ದೇವರ ಪ್ರಿಯ ವಸ್ತು ಎನ್ನಲಾಗುತ್ತದೆ.  ವಿದ್ಯೆ-ಬುದ್ಧಿ ಬೆಳವಣಿಗೆಗೆ ಗರಿಕೆ ಹುಲ್ಲನ್ನು ಖಾಲಿ ಹೊಟ್ಟೆಯಲ್ಲಿ ದಿನಾ ಸೇವಿಸುವುದು ಉತ್ತಮ ಎನ್ನಲಾಗುತ್ತದೆ. ಅಲ್ಲದೆ ಶೀತದ ಬಾಧೆಯಿರುವವರು ಇದರ ರಸವನ್ನು ದಿನಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ಹಿಂದಿನ ಕಾಲದಿಂದಲೂ ರಕ್ತ ಸೋರುವಿಕೆ ತಡೆಗಟ್ಟಲು ಗರಿಕೆ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಗರಿಕೆ ರಸವನ್ನು ಎರಡು ಬಿಂದು ಬಿಟ್ಟರೆ ತಕ್ಷಣ ರಕ್ತ ಸೋರುವುದು ನಿಲ್ಲುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ರಸವನ್ನು ಮೂಗಿಗೆ ಬಿಟ್ಟುಕೊಳ್ಳುವುದೂ ಒಳ್ಳೆಯದಲ್ಲ.

ಮಕ್ಕಳು ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರುತ್ತಿದ್ದರೆ, ಗರಿಕೆ ಹುಲ್ಲಿನ ರಸವನ್ನು ಬಿಟ್ಟರೆ ಸೋರುವುದು ನಿಲ್ಲುತ್ತದೆ. ಗರಿಕೆ ರಸವನ್ನು ಹಾಗೇ ಜಗಿಯಬಹುದು ಅಥವಾ ರಸ ಕುಡಿಯುವುದರಿಂದ ಎಲುಬು ಗಟ್ಟಿಗೊಳಿಸುವುದಲ್ಲದೆ, ರಕ್ತಸ್ರಾವವನ್ನೂ ತಡೆಗಟ್ಟುವ ಶಕ್ತಿ ನೀಡುತ್ತದೆ.

ಗರಿಕೆಗೆ ವಿಕಿರಣ ತಡೆಗಟ್ಟುವ ಶಕ್ತಿಯೂ ಇದೆ ಎನ್ನಲಾಗುತ್ತದೆ. ಇದಕ್ಕೇ ಕೆಲವು ಸೂರ್ಯಗ್ರಹಣದ ಸಮಯದಲ್ಲಿ ಆಹಾರ ವಸ್ತುಗಳ ಮೇಲೆ ಗರಿಕೆ ಹುಲ್ಲನ್ನು ಇಡುವ ಸಂಪ್ರದಾಯವೂ ನಮ್ಮಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ