ಗೋಡಂಬಿ ಜಗತ್ತಿನ ಅತಿ ಆರೋಗ್ಯದಾಯಕ ಆಹಾರ ಎಂದು ಕರೆಯಬಹುದು. ಇದರಲ್ಲಿ ಪ್ರೋಟೀನ್, ವಿಟಾಮಿನ್, ಖನಿಜಗಳು, ಮಿನಿರಲ್‌ಗಳು ಇರುತ್ತವೆ. ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಲ್ಲಿ ಗೋಡಂಬಿಯ ಪಾತ್ರ ಮುಖ್ಯವಾಗುತ್ತದೆ. ತೂಕ ಇಳಿಕೆ ಮಾಡಿಕೊಳ್ಳುವವರು ಗೋಡಂಬಿ ಸೇವಿಸಿ.. ನಿಯಮಿತವಾಗಿ ಮಿತಿಯೊಳಗೆ ತೆಗೆದುಕೊಂಡರೆ ಅದ್ಫುತ ಆರೋಗ್ಯ ಪ್ರಯೋಜನವನ್ನು ಇದರಿಂದ ಪಡೆದುಕೊಳ್ಳಬಹುದು.
ಗೋಡಂಬಿಯು ಹೃದಯದ ಆರೋಗ್ಯಕ್ಕೆ ಉಪಯೋಗಕಾರಿಯಾದದ್ದು, ಗೋಡಂಬಿಯಲ್ಲಿ ಕೋಲೆಸ್ಟ್ರಾಲ್ ಇದ್ರೂ ಆರೋಗ್ಯದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ. ಗೋಡಂಬಿಯನ್ನು ತಿನ್ನುವುದರಿಂದ ಹೃದಯದ ಸ್ನಾಯುಗಳು ಬಲಗೊಳ್ಳುತ್ತವೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಫೈಬರ್,ಪ್ರೋಟೀನ್, ಅರ್ಜಿನೈನ್ ಅಂಶ ಇರುವುದರಿಂದ ನಿತ್ಯವು ಗೋಡಂಬಿ ಸೇವಿಸುವುದು ಉತ್ತಮ..
ಮೂಳೆ ಆರೋಗ್ಯ
ಗೋಡಂಬಿಯಲ್ಲಿ ಕ್ಯಾಲ್ಸಿಯಂ.ಮೆಗ್ನೇಷಿಯಂ ಹಾಗೂ ಪೊಟ್ಯಾಶಿಯಮ್ ಖನಿಜಗಳು ಇರುವುದರಿಂದ ಮೂಳೆ ಕಾಯಿಲೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ನಿಯಮಿತವಾಗಿ ಬಾದಾಮಿ ಹಾಲು ಕುಡಿಯುವುದರಿಂದ ಮೂಳೆಗಳು ಧೃಡವಾಗುತ್ತವೆ.. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೇ ಗೋಡಂಬಿಯಲ್ಲಿ ವಿಟಾಮಿನ್ ಕೆ ಇದ್ದು, ಇದು ಮೂಳೆ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಲ್ಲದ್ದು.