ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ. ಇದು ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವು ವಿಧದ ಬೇಳೆಕಾಳುಗಳು ಲಭ್ಯವಿದೆ.
ಅವುಗಳ ಪೈಕಿ ದೇಹ ತೂಕ ಕಡಿಮೆ ಮಾಡಬೇಕಾದರೆ, ತೊಗರಿಬೇಳೆಯನ್ನು ಸೇವಿಸಬೇಕು. ಇದು ಪ್ರೋಟೀನ್ನ ಉತ್ತಮ ಮೂಲವಾಗಿದೆ. ತೂಕ ಕಳೆದುಕೊಳ್ಳಲು ಬಯಸುವವರು ತೊಗರಿ ಬೇಳೆಯನ್ನು ಈ ರೀತಿ ಸೇವಿಸಬೇಕು. ತೊಗರಿಬೇಳೆಯ ಪ್ರಯೋಜನಗಳು:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ತೊಗರಿಬೇಳೆಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ತೂಕ ನಷ್ಟಕ್ಕೆ ಸಹಾಯಕ
ತೊಗರಿಬೇಳೆಯಲ್ಲಿರುವ ಪ್ರೋಟೀನ್ ನಿಂದಾಗಿ, ಅದನ್ನು ತಿಂದ ನಂತರ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ. ಈ ಕಾರಣದಿಂದಾಗಿ ನೀವು ಹೆಚ್ಚುವರಿ ಏನನ್ನೂ ತಿನ್ನಲು ಸಾಧ್ಯವಾಗುವುದಿಲ್ಲ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆ ಸುಧಾರಿಸುತ್ತದೆ
ತೊಗರಿಬೇಳೆ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಜೀರ್ಣ ವ್ಯವಸ್ಥೆಯ ನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಒಂದು ಬಟ್ಟಲು ತೊಗರಿಬೇಳೆಯನ್ನು ನಿತ್ಯ ಸೇವಿಸಿ. ತೊಗರಿಬೇಳೆ ಯನ್ನು ಸೇವಿಸುವುದು ಹೇಗೆ ?
ಕಿಚಡಿ ರೂಪದಲ್ಲಿ ತೊಗರಿಬೇಳೆಯನ್ನು ಸೇವಿಸಬಹುದು. ತೊಗರಿಬೇಳೆಯಿಂದ ಮಾಡಿದ ಕಿಚಡಿ ಹಗುರವಾದ ಮತ್ತು ಹೊಟ್ಟೆಗೆ ಹಿಟ್ ಎನಿಸುವ ಆಹಾರವಾಗಿದೆ.