ಬೆಂಗಳೂರು: ಸೆಕೆ ಆರಂಭವಾಗಿಯೇ ಬಿಟ್ಟಿದೆ. ನೀರಿನಂಶ ಧಾರಾಳವಾಗಿ ಇರುವ, ದೇಹವನ್ನು ಸದಾ ತಂಪಾಗಿ ಇಡುವ ಕರಬೂಜ ಹಣ್ಣಿನ ಜ್ಯೂಸ್ ಬಾಯಾರಿಕೆ ನೀಗಿಸುವುದರ ಜತೆಗೆ ದೇಹಕ್ಕೂ ಬಲು ಉತ್ತಮ. ಕರಬೂಜ ಹಣ್ಣಿನಿಂದ ಇನ್ನೂ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ತಿಳಿಸಲಾಗಿದೆ.
*ಕರಬೂಜ ಹಣ್ಣು ಅಧಿಕ ಪ್ರಮಾಣದ ‘ಎ’ ಜೀವಸತ್ವ ಅಧಿಕವಿರುವುದರಿಂದ ಕಣ್ಣಿನ ದೋಷಗಳು ಹಾಗೂ ಇರುಳುಗಣ್ಣುಗಳಿಂದ ಬಾಧೆ ಪಡುತ್ತಿರುವವರು ಇದನ್ನು ಹೆಚ್ಚಾಗಿ ಸೇವಿಸಬೇಕು.
*ಆ್ಯಸಿಡಿಟಿ ಇರುವವರಿಗೂ ಕರಬೂಜ ಹಣ್ಣು ಒಂದು ಅಮೃತದಂತೆ. ಸಾಕಷ್ಟು ಕರಬೂಜ ಹಣ್ಣನ್ನು ತಿನ್ನುವುದರಿಂದ ನಿವಾರಿಸಿಕೊಳ್ಳಬಹುದು,
*ಈ ಹಣ್ಣಿನಲ್ಲಿ ಕ್ಯಾಲರಿ ಅಂಶ ತೀರಾ ಕಡಿಮೆ ಇರುವುದರಿಂದ ಇದನ್ನು ಸೇವಿಸುವುದರಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
*ಕೆಲವೊಂದು ಹೃದ್ರೋಗಗಳಿಗೂ ಕರಬೂಜದಿಂದ ಉಪಯೋಗವಿದೆ. ಇದರಲ್ಲಿ ವಿಟಮಿನ್ ‘ಸಿ’ ಅಂಶ ಹೇರಳವಾಗಿ ಇರುವ ಕಾರಣ, ಹೃದ್ರೋಗಗಳನ್ನು ದೂರ ಇಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ