ಬೆಂಗಳೂರು: ಸಂಗಾತಿ ಜತೆ ಉತ್ತಮ ಲೈಂಗಿಕ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ತಪ್ಪದೇ ಸೇವಿಸಿ!
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಅಮಿನೋ ಆಸಿಡ್ ಸಾಕಷ್ಟಿದ್ದು, ಇದು ನಿಮ್ಮ ಲೈಂಗಿಕ ಕಾಮನೆಗಳನ್ನು ಹೆಚ್ಚು ಮಾಡುತ್ತದೆ. ಅಷ್ಟೇ ಅಲ್ಲ, ಇದು ಪುರುಷರ ಜನನಾಂಗಕ್ಕೆ ಹೆಚ್ಚಿನ ರಕ್ತ ಪೂರೈಸಿ ಮತ್ತಷ್ಟು ಶಕ್ತಿ ತುಂಬುತ್ತದೆ.
ಮೆಣಸು!
ಸ್ಪೈಸಿ, ಹಾಟ್ ಮೆಣಸು ನಿಮ್ಮ ಲೈಂಗಿಕ ಜೀವನವನ್ನೂ ಹಾಟ್ ಮಾಡುತ್ತದೆ! ಮೆಣಸಿನಲ್ಲಿರುವ ರಾಸಾಯನಿಕ ಹೃದಯ ಬಡಿತ ಹೆಚ್ಚುತ್ತದೆ, ಇದು ನಿಮ್ಮನ್ನು ಉದ್ರೇಕಕಾರಿ ಮಾಡುತ್ತದೆ.
ಆಪಲ್
ಆಪಲ್ ರೊಮ್ಯಾನ್ಸ್ ನ ಸಂಕೇತ ಎನ್ನುವುದು ಸುಮ್ಮನೇ ಅಲ್ಲ. ಇದರಲ್ಲಿರುವ ಪೋಷಕಾಂಶಗಳು ನಿಮ್ಮನ್ನು ಸುದೀರ್ಘ ಅವಧಿಯವರೆಗೆ ಲೈಂಗಿಕ ಕ್ರಿಯೆ ಮಾಡಲು ಸಹಕರಿಸುತ್ತದೆ.
ಶುಂಠಿ
ಶುಂಠಿ ಕೆಮ್ಮು, ಶೀತ ಬಂದರೆ ಮಾತ್ರ ಉಪಯೋಗ ಅಲ್ಲ. ಇದು ನಮ್ಮ ನರಗಳಲ್ಲಿ ರಕ್ತ ಸಂಚಾರ ಸಲಲಿತವಾಗಿಸುತ್ತದೆ. ಇದರಿಂದ ಲೈಂಗಿಕ ಕ್ರಿಯೆ ಮಾಡಲು ಹೊಸ ಉತ್ಸಾಹ ಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.