ಬೆಂಗಳೂರು : ಹವಾಮಾನ ಬದಲಾದಂತೆ ನಮ್ಮ ಆಹಾರ ಕ್ರಮಗಳನ್ನು ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಆದ್ದರಿಂದ ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ಸೇವಿಸಿ.
ಚಳಿಗಾಲದಲ್ಲಿ ದೇಹವು ಬೆಚ್ಚಗಿಡುವ ಆಹಾರಗಳನ್ನು ಸೇವಿಸಿ. ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಎದುರಾಗುವುದರಿಂದ ಆಮ್ಲೀಯ ಹಣ್ಣುಗಳನ್ನು ಸೇವಿಸಬೇಕು. ಹಾಗೇ ಬಿಸಿ ನೀರನ್ನು ಹೆಚ್ಚಾಗಿ ಸೇವಿಸಿ.
ಅಲ್ಲದೇ ಶುಂಠಿ, ಜೇನುತುಪ್ಪ, ಸೇಬು, ಕ್ಯಾರೆಟ್, ಕಡಲೆ ಬೀಜ, ಮಂತ್ಯ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ. ಹಾಗೇ ಚಳಿಗಾಲದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಖನಿಜಾಂಶ, ವಿಟಮಿನ್ ಒಳಗೊಂಡಿರುವ ಆಹಾರ ಸೇವಿಸಿದರೆ ದೇಹವು ಬೆಚ್ಚಗಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.