ಕ್ವೀನ್ ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕಡಿಮೆ ಮಾಡಲು ಹಾಗೂ ದಂತಗಳ ಸಮಸ್ಯೆಯನ್ನು ಕಡಿಮೆಗೊಳಿಸಲು ಬೆರಿಹಣ್ಣು ಸಹಕಾರಿಯಾಗಿದೆಯಂತೆ. ಆದ್ದರಿಂದ ಟೂತ್ ಪೇಸ್ಟ್ ಹಾಗೂ ಮೌತ್ ವಾಶ್ ನಲ್ಲಿ ಬೆರಿ ಹಣ್ಣನ್ನು ಬಳಸಿದರೆ ಹಲ್ಲುಗಳಿಗೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಬೆರಿ ಹಣ್ಣುಗಳಲ್ಲಿರುವ ಪಾಲಿಫಿನೋಲ್ ಅಂಶಗಳು ಅಧಿಕವಾಗಿದೆ. ಇವುಗಳು ಆಂಟಿಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸಲಿದ್ದು, ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.